ಕೇಶವ ಮಾಧವ
***********
ಹರಿಯನು ನೆನೆಯುವೆ ಕರವನು ಮುಗಿಯುವೆ
ಮುರಳೀ ಮಾಧವ ವಾಮನನೆ
ಧರಣಿಗೆ ಅಧಿಪತಿ ಕರುಣಾ ಮೂರುತಿ
ದುರುಳರ ಬಿಡದೆಯೆ ತರಿದವನೆ ll

ಪಾವನ ಮಾಡೋ ನೋವನು ನೀಗಿಸಿ
ದೇವನೆ ನಿನ್ನನು ಭಜಿಸುವೆನು
ಈವನು ಸದ್ಗತಿ ಭಾವನು ಹರನಿಗೆ
ಮಾವಗೆ ಬುದ್ಧಿಯ ಕಲಿಸಿದನು ll

ಭಾಮೆಯ ಅರಸನು ಆಮೆಯ ರೂಪದಿ
ಭೂಮಿಯ ಹೊತ್ತಿಹ ಕೇಶವನೆ
ಕ್ಷೇಮದಿ ಪೊರೆಯುವ ಕ್ಷಮೆಯನು ನೀಡುವ
ಕ್ಷಣದಲಿ ಭಕ್ತಿಗೆ ಒಲಿದವನೆ ll

✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ