ಅಣ್ಣ-ತಂಗಿ ಸಂಬಂಧ
ವಿಷಯ: ಕುಟುಂಬ

ಜೀವನವೆಂಬ ಪಯಣದಲ್ಲಿ ತಂಗಿಯಾಗಿ ದೊರೆತವಳು
ನನ್ನ ಸುಖ ದುಃಖದಲ್ಲಿ ಗೆಳತಿಯಾಗಿ ನಿಂತವಳು

ಕಾನನದ ಕೋಗಿಲೆಗೆ ಧೈರ್ಯ ತುಂಬುವ ಗುಣದವಳು
ಮನದ ಕನಸಿಗೆ ಬಣ್ಣ ಹಚ್ಚಿ ಚಿತ್ತಾರ ಬಿಡಿಸಿದವಳು

ಚಂದ್ರನೇ ನಾಚುವಂತಹ ಬೆಳದಿಂಗಳ ಹೊಳಪವಳು
ಮಳೆಬಿಲ್ಲಿಗೆ ಮುತ್ತಿಕ್ಕಲು ರೆಕ್ಕೆಕಟ್ಟಿ ಹಾರಿದವಳು

ತೊಟ್ಟಿಲ ಕಂದಮ್ಮ ನಂತೆ ಹಾಲ್ಗಲ್ಲದ ಹವಳದಂತಿಹಳು
ಅಮವಾಸ್ಯೆ ಚಂದ್ರನಲ್ಲೂ ಹೊಸ ಉಲ್ಲಾಸ ತುಂಬಿಹಳು

ಆಘಾತಕ್ಕೂ ಅಪಘಾತ ಮಾಡುವ ಮುದ್ದು ತಂಗಿ ಇವಳು
ನಮ್ಮ ಮನೆ ಮನ ಬೆಳಗಿದ ಧೈರ್ಯಲಕ್ಷ್ಮೀ ಇವಳು

ನಗುನಗುತಾ ಬಾಳು ನನ್ನ ಮುದ್ದು ತಂ ಗಿ ನೀನು
ಬಯಸಿದ್ದೇಲ್ಲವು ನಿನ್ನದಾಗಲೆಂದು ಹಾರೈಸುವೆ ನಾನು

ನನಗು ಪಾಲುಬೇಕು ನಿನ್ನ ನೋವು ನಲಿವಿನಲ್ಲಿ
ಸದಾ ಜೊತೆಗಿರುವೆ ನಾನು ನಿನ್ನ ಜೀವನದ ಪಯಣದಲ್ಲಿ

– ಕಾಮನಬಿಲ್ಲು ಸಾಹಿತಿ ಮೌನೇಶ್. ಜೆಕೆ. ಕಲ್ಬುರ್ಗಿ