ಹೊನ್ನ ಕಿರಣ
*********
ರವಿಯ ಕಿರಣವು ತುಂಬ ಚಂದವು
ಕಡಲ ತೀರದಿ ಶೋಭಿಸೆ
ಮೆರುಗು ನೀಡುವ ಹೊನ್ನ ಬಣ್ಣವು
ಮನಕೆ ಮುದವನು ನೀಡಿದೆ ll

ಕಣ್ಣ ತುಂಬಾ ನೋಡಿ ಕೊಳ್ಳುವೆ
ಹರುಷ ತಂದಿತು ಎನಗದು
ಹಗಲು ನೋಡಲು ಸಾಧ್ಯವಾಗದೆ
ಸಂಜೆ ಕಾಣುವ ತೋಷವು ll

ಉರಿಯುತಿರುವನು ಸೂರ್ಯ ದೇವನು
ಜಗವನೆಲ್ಲವ ಬೆಳಗಲು
ಸಂಜೆ ಯಾಗಲು ಮುಳುಗಿ ಹೋದನು
ಉದಯ ಕಾಲದಿ ಬರುವನು ll

✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ