ಸೀತಾ ಮಾತೆ

ಜನಕಾರಾಯನ ಪುತ್ರಿ ಇವಳು
ಭೂತಾಯ ಒಡಲಿನಲಿ ಸಿಕ್ಕವಳು
ಶ್ರೀರಾಮಚಂದ್ರನ ಕೈ ಹಿಡಿದವಳು
ರಾಮನ ಅಗ್ನಿ ಪರೀಕ್ಷೆಯಲ್ಲಿ ಗೆದ್ದವಳು
ತನ್ನ ಪರಿಶುದ್ಧತೆಯನ್ನ ಸಾಬೀತುಪಡಿಸಿದವಳು
ಲಕ್ಷ್ಮಣ ರಾಮನ ಜೊತೆ ಕಾಡಿಗೆ ಹೋದವಳು
(ಮಾರಿಚನೆಂಬ ರಾಕ್ಷಸ) ಬಂಗಾರ ಜಿಂಕೆಯ ಸೌಂದರ್ಯಕ್ಕೆ ಮಾರಿಹೋದವಳು
ರಾವಣನಿಂದ ಅಪಹರಣಕ್ಕೆ ಒಳಗಾದವಳು
ವಾಲ್ಮೀಕಿ ಆಶ್ರಮದಲ್ಲಿ ಆಶ್ರಯ ಪಡೆದವಳು
ಪ್ರಾಣಿಗಳೊಂದಿಗೆ ಮಾತಾಡುವ ಸಾಮರ್ಥ್ಯ ಹೊಂದಿದವಳು
ಕುಶ ಮತ್ತು ಲವ ಎಂಬ ಅವಳಿ ಮಕ್ಕಳಿಗೆ ಜನ್ಮ ನೀಡಿದವಳು
ಎಲ್ಲರ ಪ್ರೀತಿಯ ಸೀತಾ ಮಾತೆ ಇವಳು
– ಚಂದ್ರಶೇಖರಚಾರಿ ಎಂ. ಶಿಕ್ಷಕರು
ವಿಶ್ವ ಮಾನವ ಶಾಲೆ ಸೀಬಾರ ಗುತ್ತಿನಾಡು ಚಿತ್ರದುರ್ಗ