ಮುಗುದೆಯ ಭಕ್ತಿ
***********
ಕರದಲಿ ಹಣ್ಣನು ಹಿಡಿದಾ ಬಾಲೆಯು
ಶಿವನನು ಪೂಜೆಸೆ ಹೊರಟಿಹಳು
ಸುಂದರ ಉಡುಗೆಯ ಉಟ್ಟಿಹ ಚೆಲುವೆಯೆ
ಬಂದಳು ಬಿಂಬದ ಕಡೆಯವಳು ll

ಹೂವಿನ ತಟ್ಟೆಯ ತುಂಬಿದ ಪರಿಮಳ
ಬೀರುತ ಸಾಗಿದೆ ಆ ಕಡೆಗೆ
ಮನದಲಿ ಹರನನು ಧ್ಯಾನಿಸಿ ಬರುವಳು
ಗಮನವ ಹರಿಸುತ ದೇವನೆಡೆ ll

ಮುಗುದೆಯ ಭಕ್ತಿಗೆ ಮೆಚ್ಚಿದ ದೇವನು
ಬಾಲೆಯ ಮುಖದಲಿ ನಗೆ ಆಗ
ಭಕ್ತಿಯು ಎಲ್ಲಿದೆ ಅಲ್ಲಿರೆ ಶಕ್ತಿಯು
ಸಂತಸ ಗೊಳ್ಳುವ ಹರನಾಗ ll

✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ