ತಾಯಿಯ ಮಡಿಲು
*************

ಜನನಿ ನಿನ್ನ ಮಡಿಲ ಸ್ವರ್ಗ ಪಡೆದ ನಾನು ಧನ್ಯನು
ನೆನೆವೆ ತಾಯೆ ಬಿಡದೆ ನಿನ್ನ ಕಳೆವೆ ಸುಖದಿ ದಿನವನು ll

ತುತ್ತು ತಿನಿಸಿ ಸಾಕಿ ಸಲಹಿ ಹೃದಯ ತುಂಬ ಪ್ರೀತಿಸಿ
ಬಾಳಿನಲ್ಲಿ ನಗುವ ತಂದೆ ಮನದ ನೋವ ಮರೆಯಿಸಿ ll

ಮಾತೆ ನೀನು ಬಳಿಯಲೆಂದು ಇರಲು ನನ್ನ ಜೀವನ
ನಿನ್ನ ಕರುಣೆ ನೆರಳಿನಲ್ಲಿ ನನ್ನ ಬದುಕು ಪಾವನ ll

✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ