ಕಡಲಲಿ ಮಹಾ ಸಮ್ಮೇಳನ
******************
ಕಡಲಿನ ನಡುವಲಿ ಗೋಷ್ಠಿಯು ನಡೆಯಿತು
ಎಡೆಯಲಿ ಇದ್ದಿತು ರಂಗಿನ ವೈಭವವು
ನುಡಿಗಳು ಕನ್ನಡ ಎದೆಯಲಿ ಮುನ್ನುಡಿ
ನಡೆಯಿತು ಸುಂದರ ನಾಡಿನ ಹಬ್ಬವು ll

ಜನುಮದ ದಿನದಾ ಸಂತಸ ಹೊಂದಲು
ಮನಸಲಿ ಸಾಹಿತ್ಯ ಜೀವದ ಭಾಷೆಯು
ಅನುದಿನ ನುಡಿಯುವ ಹೊನ್ನಿನ ಕನ್ನಡ
ಕಣಕಣದಲ್ಲೂ ಭಾವದ ಆಸೆಯು ll

ಕಂಗಳು ತುಂಬಿತು ನೀರಿನ ಅಲೆಗಳು
ತಿಂಗಳ ಬೆಳಕಿನ ಅನುಭವವಾಯಿತು
ಮಂಗಳ ನಾದವು ಹೊಮ್ಮಲು ರಾಗದಿ
ಹೆಂಗಳೆಯರೆಲ್ಲ ಗಾನವ ಪಾಡಲು ll

✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ