ಭೂಮಿಗಿಳಿದ ಚಂದ್ರ
*************
ಬಾನಿನಲ್ಲಿ ಇರುವ ಚಂದ್ರ
ಭೂಮಿಗಿಳಿದು ಬಂದನೊ
ದೂರದಿಂದ ಕಂಡೆ ನಾನು
ನಗೆಯ ಮುಖದ ಚೆಲುವನೊ

ಅಂದಗಾರ ಸುಂದರಾಂಗ
ಹೇಗೆ ನಾನು ಹೊಗಳಲೆ
ಬಂದಿಯಾದೆ ಅವಗೆ ನಾನು
ಮನವು ಇಂದು ಅರಳಿದೆ ll

ಅವನ ನಗೆಯ ನೋಟವೊಂದು
ಸೆಳೆಯಿತೆನ್ನ ಬಳಿಯಲಿ
ಬಾರೆ ಎಂದು ಕರೆದನವನು
ಕೈಯ ಹಿಡಿದ ನಗುತಲಿ ll

ಪ್ರೀತಿ ತುಂಬ ಹೃದಯದಲ್ಲಿ
ನೀತಿ ಇರುವ ಮನಸಿದೆ
ಸ್ನೇಹ ತೋರಿ ನಗುವ ಬೀರಿ
ಇರಲು ನಾನು ಬಯಸಿದೆ ll

✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ