ಬಾದಾಮಿ ಬನಶಂಕರಿ
***************
ಶಂಕರಿ ಮಾತೆ ಬನಶಂಕರಿ
ಲೋಕ ದಾತೆ ಗುಣಶಂಕರಿ
ಅಭಯ ವರದೆ ತಾಯಿ ಈಶ್ವರಿ
ಕರುಣಿಸು ಎಮ್ಮನು ಜಗದೀಶ್ವರಿ ll

ಒಂದೊಂದು ರೂಪದಿ ದರುಶನ
ಬೇಡಿ ಬರುವ ಭಕ್ತರ ಪಾಲನೆ
ಸಿಂಹವಾಹಿನಿ ಮಹಾ ಮಾಯೆ
ತ್ರಿಶೂಲ ಧಾರಿಣಿ ಜಗದಂಬಿಕೆ ll

ದುರ್ಗಾಮಾಸುರನ ಮರ್ದನ ಮಾಡಿದೆ
ತಿಲಕಾರಣ್ಯದಿ ದೇವತೆಗಳಿಗೆ ರಕ್ಷಣೆ
ನೀಡಿದ ಬಾದಾಮಿ ಕ್ಷೇತ್ರದ ಬನಶಂಕರಿ
ಭಕುತಿಗೆ ಒಲಿದು ಬರುವ ಪರಮೇಶ್ವರಿ

ಬ್ರಹ್ಮ ವಿಷ್ಣು ಶಿವಾತ್ಮಕ ಶಕ್ತಿ ರೂಪಿಣಿ
ಅಂಬಿಕೆ ದುರ್ಗಾoಬಿಕೆ ಶಿವ ಶಂಕರಿ
ಹಲವು ನಾಮವು ಹಲವು ರೂಪವು
ಭಕ್ತಿಯಿಂದ ಕರೆದರೆ ಬರುವ ತಾಯಿಯು ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ