ನಮ್ಮ ನಾಡು ಕಾಸರಗೋಡು
********************
ಕಾಸರಗೋಡು ನಮ್ಮಯ ನಾಡು
ಹೆಮ್ಮೆಯ ಚೆಲುವಿನ ನೆಲೆಬೀಡು
ಸಪ್ತಭಾಷೆಯ ಸಂಗಮ ಭೂಮಿ
ಮುತ್ತಿನಂತ ಮಾತನು ಆಡುವ ಜನರು ll

ಪ್ರಸಿದ್ಧಿ ಪಡೆದ ಕುಂಬಳೆ ಸೀಮೆಯು
ಅಡೂರು ಮಧೂರು ಮುಜುoಗಾವು
ಕಣಿಪುರವೆಂಬ ನಾಲ್ಕು ದೇವಸ್ಥಾನವು
ಬೇಡಿದ ಭಕ್ತರ ಕೋರಿಕೆ ಈಡೇರಿಸಲು ll

ಸುಂದರ ಹಸಿರು ಪರಿಸರ ನಡುವಲಿ
ಶೋಭಿಪ ಬೇಕಲ ಕೋಟೆಯು
ಸಾಗರದ ಅಂಚಿನ ತೀರಾ ಪ್ರದೇಶವು
ಕಣ್ಮನ ಸೆಳೆವುದು ಪ್ರಕೃತಿಯ ಸೊಬಗು ll

ಹಲವು ಭಾಷೆ ಹಲವು ಮತದವರು
ಒಮ್ಮತದಲ್ಲಿಯೇ ಬಾಳುವರು
ಯಕ್ಷಗಾನದ ಪಾರ್ತಿಸುಬ್ಬರ
ನಾಡಲಿ ಜನಿಸಿದ ನಾವು ಧನ್ಯರು ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ