ಶಂಭೋ ಶಂಕರ
***********
ಚಂದ್ರಕಲಾಧರ ಗಿರಿಜಾ ವಲ್ಲಭ
ಕೈಲಾಸವಾಸ ಮೃಡಹರ ಶಂಕರನೆ
ನಂದಿವಾಹನ ಭಸ್ಮವಿಭೂಷಣ
ನಯನ ಮನೋಹರ ಶಿವನೆ ಶಿವನೇ ll

ಹಾಲ ಕಡಲಲಿ ಉದಿಸಿ ಬಂದಿಹ
ಹಾಲಾಹಲವನು ಪಾನವ ಮಾಡಿದ
ಹರಶಿವ ಮಹಾದೇವ ಶಿವ ಶಂಭೋ
ಮೃತ್ಯುಂಜಯ ನೀಲಕಂಠ ಸದಾಶಿವನೇ ll

ಗಂಗಜಟಾಧರ ನಾಟ್ಯ ಸ್ವರೂಪ
ತ್ರಿಶೂಲ ಧಾರಿಯೆ ವಿಶ್ವoಬರನೆ
ಪಾಪವಿ ನಾಶಕ ಕರುಣಾಕರನೇ
ಪಾಲಿಸು ನಿರತವು ಸರ್ವೇಶ್ವರನೆ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ