ತ್ರಿಭುವನ ಮೋಹಿನಿ
**************

ತ್ರಿಭುವನ ಮೋಹಿನಿ ಪರಮ ಪಾವನಿ
ಮೂಕಾಸುರ ಮರ್ದಿನೀ ಜಗನ್ಮೋಹಿನಿ
ಜಯ ಜಯ ಶಂಕರಿ ಅಭಯದಾಯಿನಿ
ಸೌಂದರ್ಯ ದೇವತೆ ಪರಮ ಕಲ್ಯಾಣಿ ll

ತ್ರಿಜಗ ವಂದಿತೆ ತ್ರಿಮೂರ್ತಿ ಜನನಿ
ಭವ ಭಯ ದುರಿತ ನಿವಾರಿಣಿ
ತ್ರಿನೇತ್ರನರಸಿ ಶ್ರೀ ಭುವನೇಶ್ವರಿ
ಶ್ರೀದುರ್ಗಾಪರಮೇಶ್ವರಿ ಜಯ ಜಗದೀಶ್ವರಿ ll

ಪಾಲಿಸೆಮ್ಮ ಅನವರತ ಜಯ ಜನನಿ
ಲಾಲಿಸಮ್ಮ ಈಶ್ವರಿ ದಯೆ ತೋರಿ
ಹಾಡುವೆ ರಾಗ ತಾಳ ಭಾವದಿಂದಲಿ
ಕರುಣಿಸು ವರವನು ಬೇಡುವೆ ಶಿರಬಾಗಿ ll

ರಚನೆ: ಬಿ ಉದನೇಶ್ವರ ಪ್ರಸಾದ್ ಮೂಲಡ್ಕ