ಕಾಳಜಿ ಗೌರವ ಜೊತೆಯಾಗಿ

ಸಮಾಜದಲ್ಲಿ ಹೆಣ್ಣು ಗಂಡೆಂಬ ಬೇಧ
ಹೆಣ್ಣಿಗೆ ನೀಡಿದೆ ಕಟ್ಟಳೆ ನಿಯಮದ ಖೇದ
ಶೋಷಣೆಯಿಲ್ಲಿ ಕ್ರೌರ್ಯ ಅತ್ಯಾಚಾರದ ರೋಧ
ಹೆಣ್ಣಿನ ಮೇಲೆ ದೌರ್ಜನ್ಯ ನಾದ

ಹೆಣ್ಣೆಂದರೆ ನಿಸರ್ಗದತ್ತ ವೇದನೆ
ಗಂಡಿಗೆ ಭಿನ್ನವಾದಂತಹ ರಚನೆ
ಮೋಹವು ದಾಹವು ನಿವೇದನೆ
ಪಿತೃ ಪ್ರಧಾನವೇ ಮೂಲತಃ ಸಂವೇದನೆ

ಗಂಡಿನ ಅನಾದರ ತಿರಸ್ಕೃತ ಭಾವ
ನೋಯಿಸೋ ತರಹದ ಗಂಡಿನ ಕೃತ್ಯ
ಕಂಗೆಡಿಸಿದೆ ಹೆಣ್ಣಿನ ಜೀವನ ಚಿತ್ರ
ಪ್ರೀತಿಯು ಅದರ ಗೌರವ ಬಯಸಿದೆ ನಿತ್ಯ

ಒಂಟಿ ಹೆಣ್ಣಿಗೆ ಭಯ ಬೆದರಿಕೆ
ಮಾಮೂಲಿ
ನಿಂತು ಮಾಡುವ ಕಾರ್ಯದಿ
ಅಡೆ ತಡೆ ಖಯಾಲಿ
ಅರಿತವಳೆಂದು ನುರಿತವಳೆಂದು
ಎಣೆಗೊಡರಿಹರಲಿ
ಹೊಟ್ಟೆ ಕಿಚ್ಚು ದ್ವೇಷಾಸೂಯೆಗೆ
ಆಕೆ ಕಿಡಿ ಹೊತ್ತಿಹಳಲಿ

ಪುರುಷನ ಬಲವು ಸ್ತ್ರೀಗೂ ಮಿಗಿಲು
ಆಕೆಯ ಮೃದು ತನುಮನ
ಆತನ ಹೆಗಲು
ಪುರುಷನು ಸ್ತ್ರೀಯೂ ಪರಸ್ಪರ
ನೇಗಿಲು
ಊಳಲು ಬಿತ್ತಲು ಎತ್ತಂತೆ ನೊಗ ಹೇರಿರಲು

ಪೂರಕ ನಡೆ ನುಡಿ ತಾಳ್ಮೆ ಸಂಯಮ ಬೆಳೆದಿರಬೇಕು
ಪುರುಷನ ಸ್ತ್ರೀಯ ಸಹೋದರ
ಭಾವ ಬೆಸೆದಿರಬೇಕು
ಕಾಮನೆಯಲ್ಲಿ ಮಿತಹಿತವಿದ್ದು
ಹೆಣ್ಣು ಗಂಡು ಗೌರವ ಬೆರೆತಿರಬೇಕು
ಮೋಸ ವಂಚನೆ ದೋಷಾರೋ ಪಣಿ ಅರಿವು ತಿಳಿವಲಿರಬೇಕು

ಪರಸ್ಪರ ಅಂತರಂಗದ ಭಾವವು
ಬೆರೆತು ಖುಶಿ ಸಂಸಾರವೂ ಡಲು ಬೇಕು
ಗಂಡ ಹೆಂಡತಿ ಮಕ್ಕಳ ಬೆಸುಗೆ
ಗಟ್ಟಿ ಹಾಲಿನ ಥರವಿರಬೇಕು
ಹಿರಿಯರ ಗುರುಗಳ ನಮ್ರತೆಯಲ್ಲಿ ದಾರಿದೀಪವ ಬೆಳಗಿಸಬೇಕು
ಸ್ವಚ್ಛಂಧತೆ ಮನಸಲಿ ಹೊಂದಾಣಿಕೆ ಬದುಕಲಿ ನುಡಿಸಿರಬೇಕು
ಸಾಮಾಜಿಕ ಜವಾಬ್ದಾರಿ ರಕ್ಷಣೆ
ಗುರಿಯು ಮೂಡಿಬರಬೇಕು

ಅರಿವಿರಲಿ ನಾಳೆಯು ಬೇಕು
ಪೀಳಿಗೆ ಭಾರತ ಸಂಸ್ಕೃತಿ ಕಲಿಯಬೇಕು
ನಾರಿಮನಕೆ ಆನಂದ ಸಹೃದಯ ಬೆರೆಯಬೇಕು
ಆಕೆಯ ಹೃದಯ ಸರ್ವಾಂಗೀಣತೆಯತ್ತ ಒಲಿಯಬೇಕು

ವೈಭವೀಕರಿಸುವರು ಹೆಣ್ಣ
ಮೂಲೆಗಟ್ಟುವರು ಹೆಣ್ತನವ
ಮೂದಲಿಸುವರು ತಾಯ್ತನವ
ಹೊಡೆದು ಸಾಯಿಸುವರು ಮೃದುತನವ

ಕಾಳಜಿ ಗೌರವ ಜೊತೆಯಾಗಿ
ಬಾಳಿರಿ ಸಮಸಮ ಹಿತವಾಗಿ
ಕೈಕ್ಕೆ ಕೂಡಲಿ ಒಂದಾಗಿ
ಹೆಣ್ಣಿನ ಭಾವವು ಹಿರಿದಾಗಿ

– ಕಲ್ಪನಾ ಅರುಣ,ಶಿಕ್ಷಕಿ
ಬೆಂಗಳೂರು 560037
7625025640