Table of Contents

ಮಹಿಳೆಯ ರೂಪಗಳು
ತಾಯಿಯ ಗರ್ಭದಲ್ಲಿರುವಾಗ ನಿನಗೆ ನಿಶ್ಚಿಂತೆ
ನೀ ಏನಾದರೂ ೨ನೇ ಹೆಣ್ಣು ಮಗುವಾದರೆ ಅಷ್ಟೇ ಕಥೆ
ನಿನ್ನ ಕಿವಿಗೆ ಬೀಳುವ ಮೊದಲ ಶಬ್ದವೇ ಅಯ್ಯೋ ಹೆಣ್ಣಾ ಎಂಬ ವ್ಯಥೆ
ಬದುಕಿನುದ್ದಕ್ಕೂ ವಿವಿಧ ರೂಪಗಳೇ ನಿನ್ನ ಜೀವನದ ಗಾಥೆ
ಹೋಯಿತು ಹಳೆಯ ಆ ಕಾಲವು
ಬಂದಿತು ಹೆಣ್ಣು ಮಕ್ಕಳತ್ತ ಒಲವು
ಸ್ವಾವಲಂಬಿ ಜೀವನಕ್ಕೆ ಧೃಡವಾಯಿತು ಮನವು
ಸಮಾಜದ ಸವಾಲುಗಳಿಗೆ ಎದೆಯೊಡ್ಡಿ ನಿಂತವಳಿಗಿಂದು ಗೆಲುವು
ತಾಯಿಗೆ ತಾಯ್ತನ ನೀಡುವ ಮಗಳಾಗಿ
ಗಂಡನ ಪ್ರೀತಿಯ ವಂಶೋದ್ಧಾರಕಿಯಾಗಿ
ಅತ್ತೆಯ ಜವಾಬ್ದಾರಿ ಕಡಿಮೆಯಾಗಿಸುವ ಸೊಸೆಯಾಗಿ
ಮಕ್ಕಳನ್ನೇ ತನ್ನ ಆಸ್ತಿಯಾಗಿಸುವ ನಿಸ್ವಾರ್ಥ ತಾಯಿಯಾಗಿ
ಹಲವು ಕ್ಷೇತ್ರಗಳಲ್ಲಿ ನಿನ್ನ ಸಾಧನೆ
ಶಿಕ್ಷಕಿಯಾಗಿ ನಿನ್ನ ಶಿಕ್ಷಣದ ಭೋದನೆ
ಹಲವು ಮಂದಿರಗಳಲ್ಲಿ ನಿನ್ನದೇ ಆರಾಧನೆ
ಮಾತೆಯ ಮಾತ್ರೃತ್ವಕ್ಕೆ ಈ ಉಪಾಸಕಿಯ ಉಪಾಸನೆ
ತ್ಯಾಗವೇ ಬಹುದೊಡ್ಡ ಗುಣ ನೀ ಮಮತೆಯ ಸಾಗರ
ನಿನ್ನ ಜವಾಬ್ದಾರಿಗಳದ್ದೇ ಬಹುದೊಡ್ಡ ಆಗರ
ನೀನಿಲ್ಲದ ಮನೆಯು ಕಳಶವಿಲ್ಲದ ಶಿಖರ
ಖುಷಿಯಿಂದ ನಿನ್ನ ಹೊಗಳಿದರೆ ಶುರುವಾಗುವುದು ನಿನ್ನ ಮುಜುಗರದ ನಖರ
ರಚನೆ: ಸೌ. ಸುಜಾತಾ ರಾಜಕುಮಾರ ಚೌಗಲೆ ಮಾಂಜರಿ