Table of Contents

ಮೌಲ್ಯ ಸಾಗರ
ಸ್ತ್ರೀಯಂತರಾಳ ಮೌಲ್ಯಗಳ ಸಾಗರ
ತಿದ್ದಿ ತೀಡಿ ಬುದ್ದಿ ಕಲಿಸೋ ಆಗರ
ಪ್ರೀತಿ ಮಮತೆ ವಾತ್ಸಲ್ಯಗಳ ಜಾಗರ
ಸಮಾಜಮುಖಿಯು ಬೆಳಗುವಲ್ಲಿ ನೇಸರ!!
ಸ್ತ್ರೀಯು ಸಬಲೆ ಚೈತನ್ಯ ಚಿಲುಮೆ
ಮನದಂತರಂಗದಲಿ ಒಲುಮೆ
ಸುಖವು ನಲಿವು ಅವಳಿಗಿರಿಮೆ
ಬಂಧು ಬಾಂಧವರ ಒಳಿತು ಉಳುಮೆ
ಓದು ಬರೆಹ ಕೆಲಸದಲ್ಲಿ ಅವಳು
ತನ್ಮಯ
ಸಂಸಾರದ ಸುರಭಿಯಲ್ಲಿ ಅವಳು
ಹೃನ್ಮಯ
ಪತಿಯೊಳಿರ ಪ್ರೇಮ ಮಮತೆಯಲಿ
ಅವಳು ಚಿನ್ಮಯ
ಮಗುವ ವಾತ್ಸಲ್ಯ ವರಸೆಯಲಿ
ಅವಳು ತಾಯ್ಮನ
ಹೊರಗೆ ಒಳಗೆ ಭಾರ ಹೊರುವ
ತಾಳ್ಮೆ ಅವಳಿಗೆ
ಚುರುಕಿನಲ್ಲಿ ನಿರ್ವಹಿಸುವ ಜಾಣ್ಮೆ
ಅವಳಿಗೆ
ಸಮಯ ಪ್ರಜ್ಞೆ ಕಠಿಣ ಶ್ರಮವು ಗೆಲ್ಮೆ ಅವಳಿಗೆ
ತಾಯ ಹೃದಯ ನಗುವ ಮೊಗವು
ಕಾಣ್ಕೆ ಅವಳಿಗೆ
ತುಂಡು ಬಟ್ಟೆ ಕೆಟ್ಟ ಚಟ ದೂರವಾದರೆ
ಭಾರತೀಯ ಸಂಸ್ಕೃತಿಯು
ಅರಿವಾದರೆ
ನಾರಿಯರಲಿ ಒಗ್ಗಟ್ಟು ಸಂಯಮ
ಕೂಡಿಬಂದರೆ
ಭಾರತಾಂಬೆ ನಗುವಳು ಸುತೆಯ
ನೆನೆದರೆ
ಮಕ್ಕಳಲ್ಲಿ ಉದಿಸುತಿರಲಿ ಮಾನವೀಯತೆ
ಹೆಣ್ಣ ಕಂಡು ಗೌರವಿಸುವ ಆತ್ಮೀಯತೆ
ಸಾಮರಸ್ಯ ಸಹಕಾರ ಉಚ್ಚ ಮಾತುಕತೆ
ಹಸನಾಗಲಿ ಭಾರತೀಯ ನಾಗರಿಕತೆ
ಅಂತರಾಳ ಬಗೆದು ನೋಡೆ ಸ್ತ್ರೀಯು ಪ್ರಪಂಚವು
ಎತ್ತಿ ಆಡಿಸಿ ಮುದ್ದುಗರೆವ
ಅಮ್ಮ ಕುಂಚವು
ಕಲಿಸಿದಂತೆ ಜನರ ನಡೆ ಜಗದ
ಬಿಂಕವು
ಭವಿಷ್ಯ ಕುರಿತು ಕಲಿಯಲು
ಬುನಾದಿ ಹಂತವು
ಅಮ್ಮ ಬಾಳ್ಗೆ ಸಮೃದ್ದಿ ಅಪ್ಪನ
ಕಾರ್ಯಸಿದ್ದಿ
ಅಮ್ಮವೊಂದು ಶಕುತಿಯು
ನೆಮ್ಮದಿಗೆ ನೆರಳಿದು
ಸ್ತ್ರೀ ಅಂತರಾಳ ಹಿರಿದು ಜವಾಬ್ದಾರಿ
ಕೈಯಿದು
ಮನಸ ಕೊಟ್ಟು ಹೃದಯವಿಟ್ಟು
ಕೈಹಿಡಿಯೋ ನಡೆಯಿದು
ಮರೆಯದಿರಿ ಅಮ್ಮನ ಅನಾಥ
ಗೊಳಿಸದಿರಿ ಮಕ್ಕಳೇ
ಹೆತ್ತು ಹೊತ್ತು ಉಂಡ ಕ್ಷಣವ
ಕ್ಷಯಿಸದಿರಿ ಮಕ್ಕಳೇ
ಅಮ್ಮಗಾಗಿ ಸಮಯಕೊಡಿ ಅಮ್ಮಗಾಗಿ ಬೆಲೆಯನಿಡಿ
ಅಮ್ಮ ಅಮ್ಮ ಸ್ತ್ರಿ ಅವಳಂತರಾಳ
ಆಳ ಆಳ ಮಮತೆಗೂಡ
        • ಕಲ್ಪನಾಅರುಣ, ಬೆಂಗಳೂರು