Table of Contents

ಸ್ತ್ರೀ ಕುಲ ಮೂರ್ತಿ

ತಾಳ್ಮೆ ವಿನಯ ವಿದ್ಯಾ ಮೂರ್ತಿ
ಸ್ತ್ರೀ ಕುಲಕೆ ಶ್ರೇಷ್ಠತೆ ಕೀರ್ತಿ
ಹಲವು ಗಣ್ಯರ ನಡುವೆ ಮಂಗಳಾರತಿ
ಧನ್ಯೆ ಹೆತ್ತ ತಾಯಿ ಭಾರತಿ

ಈಕೆಯೇ ಗಟ್ಟಿಗಿತ್ತಿ ಮೊದಲ ಶಿಕ್ಷಕಿ
ಸಾವಿತ್ರಿ ಭಾಯಿ ಫುಲೆ ನಾಯಕಿ
ವಿದ್ಯೆ ಕಲಿತು ಕಲಿಸಿದ ಸೇವಕಿ
ಪತಿಯ ಆಸೆಯ ಈಡೇರಿಸಿದಳು ಈಕಿ

ನಕ್ಕರು ಹೊಡೆದರು ಸಗಣಿಯೆರಚಿ ಅವಮಾನಿಸಿದರು
ಬೈದರು ಹೆಣ್ಣಿಗೇಕೆ ಶಿಕ್ಷಣ ಎಂದರು
ಸ್ತ್ರೀ ಸ್ವಾಭಿಮಾನಕೆ ಪೆಟ್ಟು
ಕೊಟ್ಟರು
ಶಾಲಾ ಶಿಕ್ಷಣ ಹೆಣ್ಣಿಗೇಕೆ
ಮೂಗುಮುರಿದರು

ಜ್ಯೋತಿರಾವ್ ಫುಲೆಯ ಸಹಾಯ
ಸಹಕಾರವಿತ್ತು
ಇಬ್ಬರ ಯೋಚನೆ ಒಂದೇ ಇತ್ತು
ಸ್ತ್ರೀ ಕುಲ ಏಳ್ಗೆಯ ಕನಸಿತ್ತು
ಭಾರತ ಜನತೆಯ ಉದ್ಧಾರಕೆ ಮನಸಿತ್ತು

ಸತಾರಾ ಬಾಲಕಿ ಕತೆಯದು ಪುಳಕ
ಹೆಣ್ಣಿನ ಸಾರ್ಥಕ ಬದುಕಿನ ದ್ಯೋತಕ
ಆದರ್ಶ ಜೀವಿಯು ಎಲ್ಲರ ಚೇತಕ
ಮಹಿಳಾಮಣಿಗಳ ಉತ್ತುಂಗದ
ಏಳ್ಗೆಗೆ ಪ್ರೇರಕ

– ಕಲ್ಪನಾ ಅರುಣ, ಶಿಕ್ಷಕಿ, ಬೆಂಗಳೂರು