Table of Contents

ಚುಟುಕು ಕವಿತೆಗಳು – ಹಾಚಿ ಇಟ್ಟಿಗಿ

1. ಚೈತನ್ಯ

ಬೆಳಕಿನೊಳಗೆ ಬೆಳಕಿನ ಆಶಾಕಿರಣದ ಚೈತನ್ಯ ತುಂಬಿ ಮೋಡದ ಮರೆಯಲ್ಲಿ ಅಡಗಿ ಕುಳಿತಿರುವ
ದೂರದ ಒಂದು ಹಕ್ಕಿ ಹಕ್ಕಿಯಾಗಿಯೇ ಉಳಿಯಿತು ಆದರೆ ತನುವಲಿ ತುಂಬುವ ಜೀವದುಸಿರಾಗಿ ಧಾವಿಸಲಿಲ್ಲ.
ನೆನಪಿನಲಿ ಕಾಲಕಳೆವ ಜೀವಕೆ

2. ಕಾಂತಿ ಕಿರಣ

ಬಿಡಬೇಕೆಂದರೂ ಎಡೆಬಿಡದೆ ಕಾಡುವ ಶಕುಂತವೆ
ಉಂಡನೆಂದರೆ ತುಂಬದ ಹೊಟ್ಟೆ
ನೋಡಬೇಕೆಂದರೆ ಕಣ್ಣಿಗೆ ಕಾಣದ ಕಾಂತಿಯುಕ್ತ ನನ್ನೊಡಲ ಉಸಿರಿನೊಂದಿಗೆ
ಬೆರೆಯುವ ಬೆಲೆಕಟ್ಟದ ಆಭರಣ ಆಶೆಯಿಂದ ದೂರಸರಿಯಲೆಂದರೆ
ಮನಸ್ಸಿನ ನಿದ್ದೆ ಕೆಡಿಸಿದ ನನ್ನ ಜೀವಭಾವದ ಛಾಯಾಚಿತ್ರವೆ
ಹೇಳಿಕೊಳ್ಳಲಾಗದೆ ಪರಿತಪಿಸುತ್ತಿದೆ ಧಾರಾಪಾತ್ರೆಯಂತಿರುವ ನನ್ನ ಅಕ್ಷಿಪಟಲದಿ ಧಾರಾಕಾರವಾಗಿ ಸುರಿಯುವ ಪನ್ನೀರಿನಿಂದ
ಬಳಲಿ ಬೆಂಡಾಗಿ ಬಳಲುವ
ಜೀವವ ನೋಡಿನಿನಗೆಸಂತಸವೆ
ಮಗುವಿನ ಮನಸ್ಸಿನಂತಿರುವ
ಹೃದಯಭಾವಕದ್ದ ತುಂಬೆಲರ ಸೂಸುವ ತರಂಗಿಣಿಯೆ
ದಯೆತೋರಿಸಬಾರದೆ ನೀನೊಮ್ಮೆ

3. ಪುಟ್ಟ ಮನ

ಗೋದಿ ಬಣ್ಣದ ದುಂಡು ಮುಖದ ಚೆಲುವೆ
ನಿನ್ನ ಸಿಹಿ ಅಂಚಿನ ತುಟಿಗಳ
ಲಗುಬಗೆಯ ಮುಗುಳ್ನಗೆಗೆ
ನನ್ನ ಮನ ಸೋತು ಬಂಧಿ ಯಾಗಿ ನಿನ್ನ ಹೃದಯದ ಸೌಂದರ್ಯದೊಳಗೆ ಲೀನವಾಗಿದೆ ಕನಸುಗಳು
ಈ ಪುಟ್ಟ ಮನ

4. ಪಾರಿವಾಳ

ಓ ನನ್ನ ಪಾರಿವಾಳವೆ
ಆಕಾಶದಲಿ ಗರಿಬಿಚ್ಚಿ ಎಲ್ಲಿ ಹಾರಾಡುತ್ತಿರುವೆ
ನಿನಗಾಗಿ ಕಾದಿಹುದೊಂದು
ಹೃದಯವೆಂಬ ಪುಟ್ಟ ಗೂಡು
ಬೇಗನೆ ಬಂದು ಸೇರಿಕೋ
ಏಕೆ? ಈ ಮುನಿಸು ಹೇಳು
ನಾ ಮುದ್ದು ಮಾಡುವ
ಜೀವಭಾವದ ಪಾರಿವಾಳವೆ

5. ಗೆಳತಿ

ಗೆಳತಿ ನೀ ನಿಲ್ಲದೆ
ದಿನವಿಡೀ ಒಂಟಿಯಾಗಿ
ನಾ ಹೇಗೆ ಬದುಕಿ ಬಾಳಲಿ
ನಿನ್ನ ಮಧುರ ಮಾತುಗಳು
ನನ್ನೆದೆಯಲಿ ಗಟ್ಟಿಯಾಗಿ ಬಿತ್ತನೆಯಾಗಿವೆ ಬೆಳೆ ಕೈಗೆ ಸಿಗುವುದು ಎಂಬ
ಕನಸಿನಲ್ಲಿ ಕಾಲ ಕಳೆವ
ನಿನ್ನ ನಂಬಿದ ಪ್ರಿಯತಮನು ನಾನಲ್ಲವೆ
ಪ್ರಿಯತಮೆ ನೀ ನೀನೊಮ್ಮೆ ಯೋಚಿಸು ಪ್ರೀತಿಸುವ ಗೆಳೆಯನ ಹೃದಯದ
ರೋಧನೆಯ ವೇದನೆಯನು

6. ಜ್ಯೋತಿ

ಓ ನನ್ನ ಮುದ್ದು ಅರಗಿಣಿಯೇ
ನೀನೇ ನನ್ನ ಬಾಳಿನ ಹಣತಿ
ನಾವಿಬ್ಬರೂ ಕೂಡಿ
ಬಾಳಬೇಕು ಜ್ಯೋತಿಯಂತೆ
– ಹಾಚಿ ಇಟ್ಟಿಗಿ
ಸಾಹಿತ್ಯಿಕ ಮಾಂತ್ರಿಕ/ಆಧುನಿಕ ವಚನಕಾರ