1. ಇನ್ನೊಬ್ಬರೊಡನೆ ಸುಮ್ಮನೆ ವಾಗ್ವಾದಕ್ಕೆ ಇಳಿಯಬೇಡಿ. ಏಕೆಂದರೆ ಅಲ್ಲೊಬ್ಬನಿಗೆ ಮಾತನಾಡಲು ಬರುವುದಿಲ್ಲ.

2. ಆಹಾರದ ರುಚಿಯ ಬಗ್ಗೆ ದೂರಬೇಡಿ. ಕೆಲವರಿಗೆ ಒಂದು ಹೊತ್ತಿನ ಊಟವೂ ಸಿಗುವುದಿಲ್ಲ.

3. ನಿಮ್ಮ ಸಂಗಾತಿಯ ಬಗ್ಗೆ ಸಹನೆ ಕಳೆದುಕೊಳ್ಳದಿರಿ. ನಿನ್ನೆಯಷ್ಟೇ ಒಬ್ಬ ತನ್ನ ಸಂಗಾತಿಯನ್ನು ಮಣ್ಣು ಮಾಡಿದ ದುಃಖದಲ್ಲಿದ್ದಾನೆ.

4. ನಿಮ್ಮ ಮನೆ ಸೋರುತ್ತಿದೆ ಎಂದು ಬೇಸರ ಪಡಬೇಡಿ. ಅಲ್ಲೊಬ್ಬನ ತಲೆಯ ಮೇಲೆ ಸೂರೇ ಇಲ್ಲ.

5. ನಿಮ್ಮ ಮಕ್ಕಳ ಮೇಲೆ ಕೋಪ ಮಾಡಿಕೊಳ್ಳಬೇಡಿ. ಅವೆಷ್ಟೋ ದಂಪತಿಗಳಿಗೆ ತಂದೆ ತಾಯಿಯಾಗುವ ಭಾಗ್ಯವೇ ಇರುವುದಿಲ್ಲ.

6. ನಿಮ್ಮ ಉದ್ಯೋಗದ ಬಗ್ಗೆ ಅಸಡ್ಡೆ ತೋರಬೇಡಿ. ಅಲ್ಲೊಬ್ಬ ಯುವಕನಿಗೆ ಓದಿದ್ದರೂ ಕೆಲಸವೇ ಸಿಕ್ಕಿಲ್ಲ.

7. ನಿಮ್ಮ ಜೀವನವನ್ನು ಶಪಿಸುತ್ತಾ ಕುಳಿತುಕೊಳ್ಳಬೇಡಿ. ಎಷ್ಟೋ ಮಂದಿ ಯೌವ್ವನದಲ್ಲೇ ಹಾಸಿಗೆ ಹಿಡಿದು ನರಳುತ್ತಿದ್ದಾರೆ.

         ಜೀವನವೆಂಬುದು ಸುಂದರವಾದ ಉಡುಗೊರೆ. ಅನಾವಶ್ಯಕವಾಗಿ ಚಿಂತಿಸಿ ಅದನ್ನು ಹಾಳು ಮಾಡಿಕೊಳ್ಳಬೇಡಿ. ಬದುಕಿನಲ್ಲಿ ಏನಾದರೂ ಸರಿಯಿಲ್ಲ ಅನ್ನಿಸುತ್ತಿದ್ದರೆ ಒಮ್ಮೆ ಯೋಚಿಸಿ. ನೀವಿನ್ನೂ ಬದುಕಿದ್ದೀರಿ ನಿಮಗಿಷ್ಟವಾಗದ ಸಂಗತಿಯನ್ನು ಬದಲಾಯಿಸುವ ಅವಕಾಶ ನಿಮಗಿದೆ. ನಿಮಗೆ ಬೇಕಾದಂತೆ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿರಿ. ಧನ್ಯವಾದಗಳು