ಮೌನ ಯಾಕೆ

ಮೌನ ಯಾಕೆ ********* ಏನು ಚಿಂತೆ ನಿನಗೆ ಬಂತು ಏಕೆ ಹೀಗೆ ಕುಳಿತಿಹೆ ಯಾರೊ ಏನು ಹೇಳಿದಂತೆ ಈಗ ನಿನಗೆ ತೋರಿತೆ ll ಪ್ರೀತಿ ಮಾಡಿ ಸೋತೆ ನಾನು ದಿನವು ಹೀಗೆ ಇರುವೆನೆ ತೋಷ ಕಂಡು ದಿನವೆ ಆಯ್ತು ಮನದ ದುಃಖ…

Read more

ಪ್ರೀತಿಯ ಹಾರ

ಪ್ರೀತಿಯ ಹಾರ ********** ಬೆಕ್ಕನು ನೋಡುತ ಹಕ್ಕಿಯು ಕುಳಿತಿದೆ ಸಕ್ಕರೆಯಂತಹ ನಗುವಿನಲಿ ಉಕ್ಕಿದ ಪ್ರೀತಿಯ ಪಕ್ಕನೆ ತೋರಿಸೆ ಸಿಕ್ಕಿದ ಹಸುರಿನ ಹಾಸಿಗೆಲಿ ll ಹೇಳಲು ಕಥೆಯನು ಕೇಳುವೆ ಚಂದದಿ ಬಾಳಲು ಇಬ್ಬರು ಚೆನ್ನಾಗಿ ಆಳಲು ಅರಸನು ಕಾಳಿಯ ಪೂಜಿಸಿ ಗೋಳನು ಮರೆಸುತ…

Read more

ಮಾತೆಗೆ ನಮನ

ಮಾತೆಗೆ ನಮನ *********** ಮಗುವಿನ ಏಳಿಗೆ ಕಾಣುಲು ತಾಯಿಯು ಹೊರುವಳು ಭಾರದ ಕಾಯಕವ ಕಂಕುಳದಲ್ಲಿಯೆ ಮಗುವನು ಇರಿಸುತ ದುಡಿಯುವ ಮಾತೆಗೆ ವಂದಿಸುವ ll ನಾಡಿನ ಸಂಸ್ಕೃತಿ ಬೆಳೆಸುವ ತಾಯಿಯು ಬಾಳಿನ ದಾರಿಗೆ ಬೆಳಕಾಗಿ ಕಂದಗೆ ಮಮತೆಯ ಪ್ರೀತಿಯ ನೀಡುವ ತಾಯಿಗೆ ವಂದನೆ…

Read more

ಅರಳಿದ ಪ್ರೀತಿ

ಅರಳಿದ ಪ್ರೀತಿ ********** ಅರಳಿ ನಿಂತ ಸುಮದ ಹಾಗೆ ಹರುಷದಿಂದ ನಗುವೆಯ ನುಡಿದ ಹಾಗೆ ನಡೆದು ಬಂದು ಒಲವ ತೋರಿ ನಿಂದೆಯ ll ಚಂದದಿಂದ ನಗುವ ತೋರಿ ಎನ್ನ ಮುಂದೆ ಬಂದೆಯ ನಿನ್ನ ನೋಡಲೆಂದು ಕಾದೆ ನಿನ್ನ ಹೆಸರು ಹೇಳೆಯ ll…

Read more

ಸುಂದರಿ ಚೆಲುವೆ

ಸುಂದರಿ ಚೆಲುವೆ ************ ಏನಿದು ಮೋಹವು ನಿನ್ನಯ ವದನವು ವರ್ಣಿಸೆ ಸಾಧ್ಯವೆ ನನಗೀಗ ಪ್ರೇಮದ ಪಾಶದಿ ಸೆಳೆಯುವ ನೋಟವು ಬೀಳದೆ ಇರುವೆನೆ ನಾನೀಗ ll ಆಸೆಯ ಹೊತ್ತಿಹ ಬಯಕೆಯು ಮನಸಲಿ ತುಂಬಿದ ಸ್ನೇಹವು ಕಡಲಂತೆ ಭಾವನೆ ತೋರಿಸಿ ಪ್ರೀತಿಯ ನಗುವಲಿ ಹೂವಿನ…

Read more

ನೀಡು ದೇವರ ಭಿಕ್ಷೆ 

ನೀಡು ದೇವರ ಭಿಕ್ಷೆ ಸುನಾಮಿಯಂತೆ…..ಭೂಕಂಪದಂತೆ….. ಸಮುದ್ರದ ಅಲೆಗಳಂತೆ ಬರಸಿಡಿಲು ಬಡಿತೆ ಶ್ರೀಗಳ ಭಕ್ತರ ಹೃದಯ ಆಘಾತಗೊಂಡಿತೆ ಶಿವನ ಶಿಷ್ಯ ಶಿವಣ್ಣನವರು ಶಿವೈಕ್ಯರಾದರೆಂದು ನಾಡೆಲ್ಲಾ ಅಳುತಿರಲು ದುಃಖ ಮಡಿಲಲ್ಲಿ ತೇಲುತ್ತಿರಲು ನಿನಗಿಲ್ಲವೇ ಕರುಣೆ ಓಹೋ ಜವರಾಯನೇ ತೆಗೆದುಕೋ ನಮ್ಮ ಜೀವವ ಕೊಡು ನಮಗೆ…

Read more

ಒಲವಿನ ಸ್ನೇಹ

ಒಲವಿನ ಸ್ನೇಹ ********** ಮುತ್ತನು ಸುರಿಸಲು ಇನಿಯನು ಬಂದನು ಸುಂದರಿ ನಿನ್ನಯ ಬಳಿಯಲ್ಲಿ ಸ್ನೇಹದ ನಗೆಯನು ಬೀರುವ ಹುಡುಗಿಯ ಗಲ್ಲವ ಪಿಡಿದನು ಕರದಲ್ಲಿ ll ಇನಿಯನ ಕರೆದೆಯ ಕಣ್ಣಿನ ನೋಟದಿ ದಂತವು ಎಂತಹ ಸುಂದರವು ಕಿವಿಯಲಿ ಓಲೆಯು ಮುಡಿಯಲಿ ಮಲ್ಲಿಗೆ ಕೊರಳಲಿ…

Read more

ಪುಟ್ಟರಾಜ ಶರಣರು

ಪುಟ್ಟರಾಜ ಶರಣರು ದೇವಗಿರಿಯ ದೇವ ಧರೆಗಿಳಿದು ಜನರ ಉದ್ಧರಿಸಲು ಬಂದರು ಮೂರು ಭಾಷೆಗಳಲಿ ಸಾಹಿತ್ಯ ರಚಿಸಿ ಪ್ರಶಸ್ತಿ ಪುರಸ್ಕೃತರಾದರು ವಾದ್ಯಗಳು ನಾಟ್ಯವಾಡಿದವು ಶಾರದೆ ನಗುತ ನಲಿದಾಡಿದಳು ಸಪ್ತಸ್ವರಗಳು ಕುಣಿದಾಡಿದವು ಎಲ್ಲ ಸಂಗೀತಮಯವಾದವು ನಾದಬ್ರಹ್ಮರಾಗಿ ಅಂತರಂಗದಲಿ ಗುರು ಸ್ಮರಣೆಯ ಮಾಡುತಲಿ ವೀಣೆಯ ಝೇಂಕಾರನಾದದಲಿ…

Read more

ಮೌಲ್ಯ ಸಾಗರ

ಮೌಲ್ಯ ಸಾಗರ ಸ್ತ್ರೀಯಂತರಾಳ ಮೌಲ್ಯಗಳ ಸಾಗರ ತಿದ್ದಿ ತೀಡಿ ಬುದ್ದಿ ಕಲಿಸೋ ಆಗರ ಪ್ರೀತಿ ಮಮತೆ ವಾತ್ಸಲ್ಯಗಳ ಜಾಗರ ಸಮಾಜಮುಖಿಯು ಬೆಳಗುವಲ್ಲಿ ನೇಸರ!! ಸ್ತ್ರೀಯು ಸಬಲೆ ಚೈತನ್ಯ ಚಿಲುಮೆ ಮನದಂತರಂಗದಲಿ ಒಲುಮೆ ಸುಖವು ನಲಿವು ಅವಳಿಗಿರಿಮೆ ಬಂಧು ಬಾಂಧವರ ಒಳಿತು ಉಳುಮೆ…

Read more

ಅರಳಿದ ಕಲೆ

ಅರಳಿದ ಕಲೆ ********* ಕಲೆಯಲಿ ಇರದು ಪ್ರಾಯದ ಮಿತಿಯು ಸುಂದರ ಚಿತ್ರವು ಮೂಡಿಸಿದೆ ಶ್ರಮವನು ವಹಿಸಿ ಬಿಡಿಸಿತು ಕರವು ಅಂದವ ತೋರಿ ಮೆರೆಯುತಿದೆ ll ಕೇಸರಿ ಬಣ್ಣ ಸೆಳೆಯುತು ಕಣ್ಣ ತಾಯಿಯ ಮನಸು ಹೇಳುತಿದೆ ಜೀವನದಲ್ಲಿ ಭಾವನೆ ಇರಲು ಮೋಹವು ಉಕ್ಕಿ…

Read more

ಹೆತ್ತ ತಾಯಿ ಸತ್ತ ಮ್ಯಾಗ

ಹೆತ್ತ ತಾಯಿ ಸತ್ತ ಮ್ಯಾಗ ಹೆಗಲ ಮ್ಯಾಲೆ ಹೊತ್ತ ವೈಯ್ತಾರ ಗೋರಿ ಮುಂದ ಕುಂತ ಅತ್ತರೇನ ಹೆತ್ತ ತಾಯಿ ಮರಳಿ ಬರ್ತಾಳಾ..? ||ಪಲ್ಲವಿ|| ಪತಿಯೇ ಪರಮೇಶ್ವರನೆಂದು ತಿಳಿದು ಬಾಳಿ ರಾತ್ರಿ-ಹಗಲೆನ್ನದೆ ಕಷ್ಟದಾಗ ಕೈ ತೊಳೆದಾಕಿ ಗಂಡ ಸತ್ತ ಮೂರು ತಿಂಗಳಾಗ ಹೆತ್ತಾಳ ಮಗನ ಸುಖದ ಸುಪ್ಪತ್ತಿಗೆ ಮ್ಯಾಗ ಬೆಳಸ್ಯಾಳ ಅವನ ||೧||   ಸಾಲ ಮಾಡಿ ಅಂದದ ಮನಿ ಕಟ್ಟಿ ಮಗನ ಕೈಗಿ ಚೆಂದದ ಸೊಸೆಯ ನಿಟ್ಟಾಳ ಸೊಸೆ ಬಂದ ಮರುಗಳಿಗ್ಯಾಗ ವೈಮನಸ್ಸು ಮೂಡ್ಯಾವ ಯಾರಿಗೂ ತಿಳಿಯದ್ಹಂಗ ||೨||   ಹೆಂಡ್ತಿ ಗುಲಾಮನಾಗಿ ಊರಾಗ ತಿರಗ್ಯಾನ ಎತ್ತ ನೋಡಿದರತ್ತ ದುಷ್ಟರ ಸಂಘ ಮಾಡ್ಯಾನ ಹೆತ್ತ ಕರುಳ ಮರೆತು ಕಾಲ ಕಳಿಯ್ತಾನ ತಿಳಿದು-ತಿಳಿಯದ್ಹಂಗ ತುಳಿದು ಹೋಗ್ತಾನ ||೩||   ಹೆತ್ತ ತಾಯಿ ಹಾಸಿಗೀಯ ಹಿಡದಾಳ ಹೆಂಡ ಕುಡಿದ ಮಗನ ಬೈಗುಳ ಕೇಳ್ಕೊಂತ ನಟ್ಟ-ನಡು ಓಣ್ಯಾಗ ನಿಂತ ಸೊಸೆ ಹೇಳ್ತಾಳ ಅತ್ತಿ-ಮಗನ ಕಲಾಗ ಜೀವನ ಬ್ಯಾಸರಾಯ್ತ ||೪||   ಹೆತ್ತ ಕರುಳ ಹೊತ್ತಿ ಉರಿತೈತಿ ನಡು ಬೀದಿಯೊಳ್ಗ ನಿಂತ ಬಿಕ್ಕಿ-ಬಿಕ್ಕಿ ಅಳತೈತಿ ಯ್ಯಾಕಾರ ಹುಟ್ಟಿದ್ನಿ ಈ ಭೂಮಿ ಮ್ಯಾಗಂತ ಭಾರವಾದ ಜೀವ ಗೋರೀಯ ನೆನಸೈತಿ ||೫||  …

Read more

Other Story