ಯುಗಾದಿ ಸಂಭ್ರಮ
ಶೀರ್ಷಿಕೆ:- ಹಿಂದೂ ಪರಂಪರೆ

ವಸಂತ ಮಾಸದ ಚಿಗುರೆಲೆ ಹಸಿರಲಿ
ಭಾರತೀಯರ ಚೈತ್ರ ಮಾಸ‌ ಪಾಂಡ್ಯದಲಿ
ಹಿಂದೂಗಳ ಪವಿತ್ರ ಹಬ್ಬದ ಹರುಷದಲಿ
ಹೊಸ ಸಂವತ್ಸರಕ್ಕೆ ಹೊಸದಾಗಿ ಸ್ವಾಗತಿಸಲಿ

ಆದಿ ಅಂತ್ಯದ ಮಧ್ಯೆ ಹೊಸದಾಗಿ ಬಂದಿರಲು
ರೈತಾಪಿ ಜನಗಳಿಗೆ ಹೊಸ ಹರುಷ ತಂದಿರಲು
ಭೂಮಿ ಪೂಜೆ ಮಾಡಿ ಹೊಸ ಬಟ್ಟೆ ಹಾಕಿದರು
ಪ್ರಕೃತಿಯ ಜೊತೆ ವಿಜ್ಞಾನದ ಕಡೆ ಸಾಗಿರಲು

ವಸಂತ ಕೋಗಿಲೆ ಸಂತೋಷದ‌ ಗಾನ ಹಾಡಿರಲು
ಪುರಾಣದಲ್ಲಿ ಸೋಮಾಸುರ ರಾಕ್ಷಸ ವೇದ ಕದ್ದಿರಲು
ಬ್ರಹ್ಮನು ರಕ್ಷಿಸಿ ವಿಷ್ಣುವಿಗೆ ನೀಡಿದ ಸುದಿನ ಯುಗಾದಿಯು
ಸೌರಮಾನ ಚಂದ್ರಮಾನ ಎರಡ ರೀತಿ ಯುಗಾದಿ ಆಚರಿಸಲು

ಹಿಂದೂಗಳ ಪವಿತ್ರ ಹಬ್ಬದ ಸಂಭ್ರಮ
ಹೊಸವಷ೯ ಬಂದು ಹೊಸಹೊಸ
ಆಸೆ ಮೂಡಿರಲು
ಬೇವು ಬೆಲ್ಲದ ಜೊತೆ ಸಿಹಿಕಹಿ ನೆನಪು ಮೇಲಕು ಹಾಕುತ
ಒಂದಾಗಿ ಬಾಳೋಣ ಎಂದು ಹರುಷದಿಂದ

– ಕು.ಕವಿತಾ ಎಂ. ಮಾಲಿ ಪಾಟೀಲ, ಮಂದೇವಾಲ ಕಲಬುರ್ಗಿ