SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ
• ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿರಿ.
• ಓದಿರುವ ವಿಷಯವನ್ನು ಗುಂಪಲ್ಲಿ ಚರ್ಚೆ ಮಾಡಿರಿ.
• ನೀವು ಓದಿರುವ ವಿಷಯವನ್ನು ಮತ್ತೊಬ್ಬರ ಮುಂದೆ ವ್ಯಕ್ತಪಡಿಸಿರಿ ಅಂದಾಗ ನಿಮಗೆ ಬಹಳ ದಿನಗಳ ಮಟ್ಟಿಗೆ ನೆನಪಿರುತ್ತದೆ.
• ಪ್ರತಿನಿತ್ಯ ತರಗತಿಗಳಲ್ಲಿ ಹೇಳುವ ವಿಷಯ ನಾಳೆ ಪರೀಕ್ಷೆಗಳಲ್ಲಿ ಬಂದೇ ಬರುತ್ತದೆ ಎಂದು ಗಮನ ಕೊಟ್ಟು ಕೇಳಿರಿ.
• ಗಣಿತ ಹಾಗೂ ವಿಜ್ಞಾನ ಚಿತ್ರಗಳನ್ನು ನಿದ್ದೆ ಬರುವ ಸಮಯದಲ್ಲಿ ಹಾಗೂ ಊಟವಾದ ಮೇಲೆ ಪ್ರಾಕ್ಟೀಸ್ ಮಾಡಿರಿ.
• ಪರೀಕ್ಷೆಯ ದಿನ ಓದಬೇಡಿ, ಓದಿ ಗೊಂದಲ ಮಾಡಿಕೊಳ್ಳಬೇಡಿ. ಪರೀಕ್ಷೆಯ ಹಿಂದಿನ ದಿನ ರಾತ್ರಿ 10 ಗಂಟೆಯವರೆಗೆ ಮಾತ್ರ ಓದಿ ನಂತರ ಚೆನ್ನಾಗಿ ನಿದ್ದೆ ಮಾಡಿ.
• ಪ್ರತಿನಿತ್ಯ ನೀವು ಓದುವಾಗ ನಾಳೆಯೇ ಪರೀಕ್ಷೆ ಇದೆ ಎಂದು ಓದಿರಿ.
• ಎಲ್ಲಾ ರೀತಿಯ ಗಣಿತ ಸೂತ್ರಗಳನ್ನು ಒಂದು ಕಡೆ ಲಿಸ್ಟ್ ಮಾಡಿ ಬರೆದು ಇಟ್ಟುಕೊಳ್ಳಿ.
• ಈ ರೀತಿಯ ಪರೀಕ್ಷೆ ನಿಮ್ಮ ಬದುಕಲ್ಲಿ ಒಮ್ಮೆ ಮಾತ್ರ ಬರುತ್ತದೆ. ಹಾಗಾಗಿ ಚೆನ್ನಾಗಿ ಓದಿರಿ.
• ನಿಮ್ಮ ಪರೀಕ್ಷೆಯ ಫಲಿತಾಂಶ ಪತ್ರಿಕೆಗಳಲ್ಲಿ ಪ್ರಕಟವಾಗುವಂತಿರಬೇಕು ಆ ನಿಟ್ಟಿನಲ್ಲಿ ಓದಿರಿ.
• ನಿಮ್ಮ ಪರೀಕ್ಷೆಯ ಫಲಿತಾಂಶ ವೇದಿಕೆ ಮೇಲೆ ಸನ್ಮಾನ ಸ್ವೀಕರಿಸುವಂತಾಗಿರಬೇಕು.
• ನಿತ್ಯ ತೋರುಬೆರಳನ್ನು ಅಕ್ಷರದ ಮೇಲಿಟ್ಟೆ ಓದಿರಿ.
• ಸಾಧ್ಯವಾದರೆ ನೀವು ಏನನ್ನು ಓದಿರುತ್ತೀರೋ ಅದನ್ನೆಲ್ಲವನ್ನು ನೋಡದೆ ಬರೆದು ತೆಗೆಯಿರಿ.
• ಪರೀಕ್ಷೆಗಳಲ್ಲಿ ಯಾವುದನ್ನು ಖಾಲಿ ಬಿಡಬೇಡಿ ಗೊತ್ತಿರದಿದ್ದರೂ ಏನಾದರೂ ಅದಕ್ಕೆ ಸಂಬಂಧಿಸಿದ ಮಾಹಿತಿ ಬರೆಯಿರಿ.
• ಒಂದೇ ರೀತಿಯ ಪೆನ್ ಅನ್ನು ಉಪಯೋಗಿಸಿರಿ.
• ಪರೀಕ್ಷೆಯ ಕೋಣೆಯಲ್ಲಿ ಅಕ್ಕಪಕ್ಕದವರನ್ನು ನೋಡಿ ಭಯಪಡಬೇಡಿ. ನಿಮ್ಮ ಆತ್ಮವಿಶ್ವಾಸದ ಮೇಲೆ ನಂಬಿಕೆ ಇಡಿ.
• ಪರೀಕ್ಷೆ ಸಮಯದಲ್ಲಿ ಭಯವಾದಾಗ ನಿಮ್ಮ ಎರಡು ಹೆಬ್ಬೆರಳುಗಳನ್ನು ಜೋರಾಗಿ ಊದಿಕೊಳ್ಳಿ
• ಓದುವ ಸಮಯದಲ್ಲಿ ಮತ್ತು ಬರೆಯುವ ಸಮಯದಲ್ಲಿ ಅತೀ ಹೆಚ್ಚು ನೀರನ್ನು ಕುಡಿಯಿರಿ.
• ಪ್ರತಿನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಮೆದುಳನ್ನು ಕ್ರಿಯಾಶೀಲಗೊಳಿಸಲು ಒಂದು ಲೋಟ ಬಿಸಿ ನೀರನ್ನು ಕುಡಿಯಿರಿ.
• ಪ್ರತಿನಿತ್ಯ ಮಲಗುವಾಗ ತಪ್ಪದೇ ಬಾಳೆಹಣ್ಣು ತಿನ್ನಿರಿ ಇದರಿಂದ ನಿಮ್ಮ ಮೆದುಳು ಕ್ರಿಯಾಶೀಲವಾಗುವುದು.
• ನಿತ್ಯ ಮೂರು ಬಾರಿಯಾದರೂ ಕಿವಿ ಹಿಡಿದು ಬಸ್ಕಿ ಹೊಡೆಯಿರಿ. ಇದು ಮೆದುಳನ್ನ ಚುರುಕುಗೊಳಿಸುವುದು.
• ಸಾಧ್ಯವಾದರೆ ಎರಡು ಬಾರಿ ಬ್ರಮರಿ ಪ್ರಾಣಾಯಾಮ ಮಾಡಿರಿ.
• ಒಂದು ದಿನಕ್ಕೆ ಮೂರು ಬಾರಿ ಅನುಲೋಮ ವಿಲೋಮ ಪ್ರಾಣಾಯಾಮ ಮಾಡಿರಿ.
• ಪ್ರತಿ ವಿಷಯಕ್ಕೆ ಸಮನಾದ ಸಮಯವನ್ನು ನೀಡಿ ಅಭ್ಯಾಸ ಮಾಡಿರಿ.
ನಿಮ್ಮ ಪರೀಕ್ಷೆಗಳಿಗೆ ಶುಭವಾಗಲಿ……
ಶ್ರೀ ಮುತ್ತು ಯ.ವಡ್ಡರ, ಶಿಕ್ಷಕರು
ಬಾಗಲಕೋಟ