ಕಹಿ ಸತ್ಯ ಆದರೂ ಇದುವೇ ವಾಸ್ತವ..!
ತಮ್ಮ ಮಕ್ಕಳನ್ನು ಅಮೇರಿಕ, ಆಸ್ಟ್ರೇಲಿಯಾ ಮತ್ತು ಕೆನಡಾಗೆ ಕಳುಹಿಸಿ ಗರ್ವ ಪಡುವವರು ಹೆಚ್ಚಾಗಿ ಬೇರೆಯವರ ಭುಜಗಳ ಮೇಲೆ ಸ್ಮಶಾನಕ್ಕೆ ಹೋಗುತ್ತಾರೆ. ನನ್ನ ಮಗ ಅಮೇರಿಕಾದಲ್ಲಿ ಕೆಲಸ ಮಾಡ್ತಾ ಇದ್ದಾನೆ. ಅವನಿಗೆ ಅಲ್ಲಿ 80 ಸಾವಿರ ಡಾಲರ್ ಸಂಬಳ ಇದೇ. ಅದು 64 ಲಕ್ಷ ರೂಪಾಯಿ ಆದ ಹಾಗೆ ಆಯ್ತು. ನೀನು ಯಾಕೆ ಅಮೆರಿಕಾಕ್ಕೆ ಹೋಗುವ ಪ್ರಯತ್ನ ಮಾಡಬಾರದು. ಅವನತ್ರ ಕೇಳು, ಅವನು ನಿನ್ನನ್ನು ರೆಫರ್ ಮಾಡಬಹುದು ಅಂದ್ರು ಅವ್ರು.
ಇಲ್ಲಾ ಅಂಕಲ್, ನನಗೆ ಬೇರೆ ದೇಶಕ್ಕೆ ಹೋಗುವ ಆಸೆ ಇಲ್ಲಾ. I ಐ ಯಾಮ್ ಹ್ಯಾಪಿ ಇಯರ್ ಅಂದೆ. ಅದಕ್ಕವರು, ಹ್ಮ್! ಎಲ್ಲರಿಗೂ ಹೋಗೋಕೂ ಸಾಧ್ಯ ಇಲ್ಲ ಬಿಡು ಅಂತ ನುಸುನಕ್ಕರು ! ನಾನು ಅವರ ಮುಖ ನೋಡಿ ನುಸುನಕ್ಕೆ, ಯಾಕೆ ನೀನು ನಗುತ್ತ ಇದ್ದೀಯ ಅಂದ್ರು ಅವರು. ಅಂಕಲ್ ನಾನು ನಿಮಗೆ ಬೇರೆಲ್ಲಾ ವಿಚಾರಗಳ ಬಗ್ಗೆ, ನನಗೆ ನನ್ನ ಊರಿನ ಮೇಲಿರುವ ಪ್ರೀತಿಯ ಬಗ್ಗೆ ಎಲ್ಲ ಹೇಳಲ್ಲ ಅಥವಾ ಅವನ ದುಡ್ಡಲ್ಲಿ ಅವನು ಖರೀದಿ ಮಾಡಲು ಸಾಧ್ಯವಿರುವ ಐಟಂಗಳು, ನಾನು ನನ್ನ ದುಡ್ಡಲ್ಲಿ ಇಲ್ಲಿ ಖರೀದಿ ಮಾಡುವ ಐಟಂಗಳ ಬಗ್ಗೆ ಹೇಳ್ತೀನಿ ಅಂದೇ. ಅವರಿಗೆ ಒಂದು ಕ್ಷಣ ಇದೆಂತ ಇಂಗ್ಲಿಷ್ ಮಾತಾಡ್ತಾ ಇದ್ದಾನೆ ಇವನು ಅಂತಾ ಅನ್ನಿಸಿತು.
ಕಾಸ್ಟ್ of ಲಿವಿಂಗ್ ಗೊತ್ತಲ್ವಾ ಅಂಕಲ್ ಅಂದೇ, ಹುಂ, ಅಂದ್ರು ಅವರು. ನೋಡಿ ಬೇರೆ ಬೇರೆ ದೇಶದ ಬದುಕಿಗೆ ಬೇಕಾದ ಖರ್ಚುಗಳು ಬೇರೆ ಬೇರೆ ಇರುತ್ತೆ ಅಂಕಲ್. ಈಗ ನೀವಿಲ್ಲಿ 10 ರೂಪಾಯಿ ಕೊಟ್ಟು ಒಂದು ಫಿಲ್ಟರ್ ಕಾಫಿ ಕುಡೀತೀರಿ, ಸ್ಟಾರ್ ಬಕ್ಸ್ ಗೆ ಹೋಗಿ ಕಪ್ಪುಚ್ಚಿನೋ ಬೇಕು ಅಂದ್ರೆ ಅದಕ್ಕೆ ನೀವು 100 ರೂಪಾಯಿ ಕೊಡ್ತೀರಿ, ಅದಕ್ಕೆ ನೀವು ಅಮೇರಿಕಾದಲ್ಲಿ 7$ ಅಥವಾ 420 ರೂಪಾಯಿ ಕೊಡ್ಬೇಕು. ಇಲ್ಲಿ ಅಕ್ಕಿಗೆ 45-50 ರೂಪಾಯಿ ಕೆಜಿಗೆ ಇದೇ. ಅಲ್ಲಿ ಅದನ್ನೇ ನೀವು 300 ರೂಪಾಯಿ ಕೊಟ್ಟು ತೊಗೋಬೇಕು. ಇಲ್ಲಿ ಕರೆಂಟ್ ಬಿಲ್ 1000-2000 ಸಾವಿರ ಬರುತ್ತೆ ಅಲ್ಲಿ ಅದು 10,0000 ರೂಪಾಯಿಗಿಂತ ಮೇಲಿರುತ್ತೆ, ಇಲ್ಲಿ ಮನೆ ರೆಂಟ್ 15-25 ಸಾವಿರ ಇರುತ್ತೆ, ಅಲ್ಲಿ ತಿಂಗಳಿಗೆ 1.5 ಲಕ್ಷ ತಿಂಗಳ ರೆಂಟ್ ಕೊಡ್ಬೇಕು ಶೇರಿಂಗ್ ಅಲ್ಲಿ ಇರೋದಕ್ಕೆ.
ಇಷ್ಟೆಲ್ಲ ಮಾಡಿ ಕಷ್ಟ ಪಟ್ಟು ಅವನು ಒಂದು 10 ಸಾವಿರ , 15 ಸಾವಿರ ಡಾಲರ್ ಉಳಿಸಿ, ವರ್ಷಕ್ಕೆ 15 ಲಕ್ಷ ಉಳಿಸಿದೆ ಅಂತಾ ಇರಬಹುದು. ಊರಿಗೆ ಬಾರದೇ ಸಂಬಂಧಗಳೆಲ್ಲಾ ಮರೆತುಹೋಗಿ, ದಿನಕ್ಕೊಮ್ಮೆ ವಾಟ್ಸಪ್ಪ್ ಕಾಲ್ ಮಾಡಿ, ಹುಟ್ಟಿಗೂ, ಸಾವಿಗೂ, ನೋವಿಗೂ ಬರದೇ ಇರುವ ಬಾಳು ಬೇಕಾ ಅಂಕಲ್. ನನ್ನ ದೇಶದಲ್ಲಿ, ನನ್ನ ಊರಲ್ಲಿ ನನಗೊಂದು ಐಡೆಂಟಿಟಿ, ನನಗೊಂದು ಸಣ್ಣ ಮನೆ, ಜಾಗ ಎಲ್ಲಾ ಇದೇ. ನನ್ನ ತೋಟದ ತೆಂಗಿನ ಕಾಯಿ ತಿನ್ನಬೇಕು, ಎಳನೀರು ಕುಡಿಯಬೇಕು, ದಾಸವಾಳದ ಹೂವನ್ನು ನೋಡಿ ಖುಷಿ ಪಡಬೇಕು ಅನ್ನುವ ಸಣ್ಣ ಸಣ್ಣ ಆಸೆಗಳಿವೆ. 5-6 ಲಕ್ಷ ಉಳಿಸೋಕೆ ನನಗೆ ಸಾಧ್ಯ ಆಗುತ್ತೆ. ಐ ಯಾಮ್ ಹ್ಯಾಪಿ ವಿತ್ ಥಟ್ ಅಂಕಲ್ ಅಂದೇ. ಈಗ ಅಂಕಲ್ ನಾನು ಎದುರು ಸಿಕ್ಕಿದ್ರೂ ಮಾತಾಡಲ್ಲ.
ಸತ್ಯಘಟನೆಯಾದಾರಿತ ಕಾಲ್ಪನಿಕ ಕಥೆ- ವಿದೇಶಗಳಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವವರ ಬಗ್ಗೆ ತಿರಸ್ಕಾರ, ಬೇಸರ, ಈರ್ಷೆಯಾಗಲೀ ಇಲ್ಲ. ಆದರೆ ಅವರು ಬದುಕುವ ಬದುಕು ಮಾತ್ರವೇ ಬದುಕು, ಅವರ ದುಡಿಮೆ ಮಾತ್ರವೇ ದುಡಿಮೆ ಅಂದುಕೊಳ್ಳುವ, ಕೆಲವು ತಂದೆ-ತಾಯಿಯರಿಗೆ ಇದು ಅರ್ಪಣೆ ಅಷ್ಟೇ !
ಲೇಖಕರು: ವಿಶ್ವಾಸ ಡಿ. ಗೌಡ
ಸಕಲೇಶಪುರ – 9743636831