Table of Contents

ಹೆಣ್ಣು ಸಂಸಾರದ ಕಣ್ಣು
ದೈವಸ್ವರೂಪಿ ತಾಯಿ
ಪತಿಯ ಬಾಳಸಂಗಾತಿ ಮಡದಿ
ವಾತ್ಸಲ್ಯ ಮೂರ್ತಿ ಸಹೋದರಿ
ಕರುಳಿನ ಕುಡಿ ಮುದ್ದಿನ ಮಗಳು
ಅಜ್ಜನ ಚಿಗುರೆ ಮೊಮ್ಮಗಳು
ಹೆಣ್ಣು ಎಂಬುವವಳು ಹಲವು ಶಕ್ತಿಗಳ ಸಂಗಮ
ಮಮತೆಯ ಮಾತೆ, ಪ್ರೀತಿ ವಾತ್ಸಲ್ಯ ಸ್ನೇಹ
ಸೌಹಾರ್ದತೆ ಅಕ್ಕರೆ ಸಹನೆ
ಮಾನವೀಯತೆ ಮೆರೆದ
ಸೃಷ್ಟಿಯ ಸುಂದರ ಕಲಾಕೃತಿಯೂ ಹೆಣ್ಣು
ಹೆಣ್ಣು ಕನಸೂ ಹೌದು, ವಾಸ್ತವವೂ ಹೌದು,
ಬಲವೂ ಹೌದು,ಬುದ್ದಿಯೂ ಹೌದು,
ಮಹಾಕಾವ್ಯಗಳ ಪ್ರಧಾನ ಶಕ್ತಿಯೂ ಹೌದು.
ಭ್ರೂಣಹತ್ಯೆ, ಅನಕ್ಷರತೆ, ತಾರತಮ್ಯ,
ಅವಮಾನ, ಅಗೌರವ, ಅತ್ಯಾಚಾರ,
ಹೆಣ್ಣಿನ ಬವಣೆ ದಾರುಣ ಸ್ಥಿತಿ ಇಂದಿಗೂ ಕೂಡ ಪ್ರಚಲಿತ
ಗೌರವಿಸುವ ಹೆಣ್ಣನು,
ಪ್ರೀತಿ ಪ್ರೇಮದ ಸಾಕ್ಷಾತ್ಕಾರ ಮೂರ್ತಿಯನ್ನಾಗಿ ನೋಡಿ
ಕಾಮನಬಿಲ್ಲು ಸಾಹಿತಿ ಮೌನೇಶ್. ಜೆಕೆ. ಕಲಬುರ್ಗಿ