ಬಡತನದಲ್ಲಿ ದುಡಿಮೆ

ಕಾಯೋನೇ ಕೈ ಬಿಟ್ಟರೆ ಕಾಲಡಿಯ ಭೂಮಿ ಕಾಣೆಯಾಗದೇ?
ಭರವಸೆಯ ಬೆಳಕು ಆರಿ ಹೋದಾಗ ಸುತ್ತಲೂ ಕತ್ತಲಾದಂತೆ ತಾನೆ ?
ಹೊತ್ತು ಏರುವ ಮುನ್ನ ಹೊರಟು ದುಡಿಯುವ ದೇಹ,
ಹೊತ್ತು ಇಳಿದರೂ ಹರಿಸಿ ಬೆವರು ತೀರದಾಯ್ತು ದಾಹ;
ಹೊತ್ತೊಯ್ಯುವುದೇನಿಲ್ಲಾ ಆದರೂ ಆವರಿಸಿದೆ ವ್ಯಾಮೋಹ,
ಹೊತ್ತುರಿದಂತೆ ಧರಣಿ ಬೇಸಿಗೆಯಲ್ಲಿ ಕನಸುಗಳಾದವು ಸ್ವಾಹಾ!

-ನಾಗರಾಜ ಗುನಗ
ನಿವೃತ್ತ ಸೈನಿಕರು
ಕೋಡಕಣಿ/ಕುಮಟಾ ತಾಲ್ಲೂಕು