ಅಭಿಲಾಷೆ ಕಾದಂಬರಿ ಸಂಚಿಕೆ -45

ಆತ್ಮೀಯ ಓದುಗರಿಗೆ‌ ವಂದನೆಯನ್ನು ತಿಳಿಸುತ್ತಾ 🙏🙏

ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 45 ನೇ ಸಂಚಿಕೆಯನ್ನು ಪ್ರಕಟಿಸುತ್ತಿದ್ದೇನೆ.

  • ಹಿಂದಿನ ಸಂಚಿಕೆಯಲ್ಲಿ

ವಿಕ್ರಮ್ ಆಶಾಳಿಗೆ ಫೋನ್ ಮಾಡಿ, ನೀನಿಲ್ಲದೆ ಬದುಕಿರುವುದಿಲ್ಲವೆಂದರೂ, ಅವನ ಮನವಿಯನ್ನು ಆಶಾ ತಿರಸ್ಕರಿಸಿರುತ್ತಾಳೆ

  • ಕಥೆಯನ್ನು ಮುಂದುವರೆಸುತ್ತಾ

ಆಶಾಳಿಂದ ತಿರಸ್ಕೃತಗೊಂಡ ವಿಕ್ರಮ್ ಭಗ್ನ ಪ್ರೇಮಿಯಾಗಿ ತನಗೆ ಆಶಾ ಸಿಗುವುದೇ ಇಲ್ಲವೆಂದು ನಿರಾಸೆಗೊಂಡು, ಆಶಾಳ‌ ಮನವೊಲಿಸಲು, ತನ್ನ ಪ್ರಯತ್ನವನ್ನು ಮುಂದುವರೆಸಿರುತ್ತಾನೆ.
ಎರಡು ದಿನಕ್ಕೆ ಮೂರು ದಿನಕ್ಕೆ ಆಶಾಳಿಗೆ ಬೇರೆ ಬೇರೆ ನಂಬರುಗಳಿಂದ ಫೋನ್ ಮಾಡಿ ನೀನು ನಮ್ಮಣ್ಣನನ್ನು ಕೇಸ್ ನಿಂದ ಪಾರುಮಾಡದಿದ್ದರೂ ಪರವಾಗಿಲ್ಲ, ನನ್ನ ಸ್ನೇಹವನ್ನು‌ ತೊರೆಯ ಬೇಡವೆಂದು ಕಳಕಳಿಯಿಂದ ಬೇಡಿಕೊಂಡರೂ ಆಶಾಳ‌ ಮನಸ್ಸು ಕರಗುವುದಿಲ್ಲ.
ನನಗೆ ಫೋನ್ ಮಾಡಲೇ ಬೇಡವೆಂದು ಕಟ್ಟುನಿಟ್ಟಾಗಿ ಹೇಳಿದರೂ
ಒಂದು ದಿವಸ ವಿಕ್ರಮ್ ಗೆ ಆಶಾ ಇಲ್ಲದೆ ತುಂಬಾ ಬೇಸರಗೊಂಡು ಫೋನ್ ಮಾಡಿದಾಗ
ನೋಡು ವಿಕ್ರಮ್ ನನಗೆ ಪದೇ ಪದೇ ಫೋನ್ ಮಾಡಿ ತೊಂದರೆ ಕೊಡುತ್ತಿದ್ದರೆ, ನಾನು ಪೋಲೀಸ್‌ ಕಂಪ್ಲೇಂಟ್ ಕೊಡಬೇಕಾಗುತ್ತದೆ. ಹಿಂದೆ ಒಂದು ಸಲ ನಿನ್ನ ಮೇಲೆ ನಮ್ಮಪ್ಪ ಪೋಲೀಸ್ ಕಂಪ್ಲೇಂಟ್ ಕೊಟ್ಟಿದ್ದಕ್ಕೆ, ಇನ್ಸ್‌ ಪೆಕ್ಟರ್ ರವರು ಎಚ್ಚರಿಕೆ ನೀಡಿದ್ದಾರೆ, ಈ ಸಲ ಏನಾದರೂ ನಾನು ಕಂಪ್ಲೇಂಟ್ ಕೊಟ್ಟರೆ, ನಿಮ್ಮಣ್ಣನ ಜೊತೆಗೆ ನಿನ್ನನ್ನೂ ಜೈಲಿನಲ್ಲಿ ಕೂಡಿಸುತ್ತಾರೆ ಎಂದು ಆಶಾ ನುಡಿಯಲು
ಓ ಹೋ ನನ್ನ ವಿರುದ್ದ ಕಂಪ್ಲೇಂಟ್ ಕೊಟ್ಚಿದ್ದು ನಿಮ್ಮಪ್ಪನಾ, ನೋಡು ನಾನು ಯಾವುದಕ್ಕೂ ಹೆದರುವುದಿಲ್ಲ. ನೀನು ನನ್ನ ಮದುವೆಯಾಗಬೇಕಷ್ಟೇ ಎಂದು ವಿಕ್ರಮ್ ಹೇಳಲು
ಓ ನನ್ನನ್ನು ಹೆದರಿಸುತ್ತಿದ್ದೀಯಾ? ನಾನು ಇದಕ್ಕೆಲ್ಲಾ‌ ಹೆದರುವವಳಲ್ಲವೆಂದು ಆಶಾಳ‌ ಮಾತಿಗೆ
ನಿನ್ನನ್ನು ಹೇಗೆ ಮದುವೆಯಾಗಬೇಕೋ ನನಗೆ ಗೊತ್ತಿದೆ ಎಂದು ವಿಕ್ರಮ್ ಗುಡಿಗಿದಾಗ
ಓ ಹೋ ಪರವಾಗಿಲ್ಲ‌, ನಿಮ್ಮ ಫ್ಯಾಮಿಲಿಯಲ್ಲಿ ಎಲ್ಲರಿಗೂ ಕ್ರಿಮಿನಲ್‌ ಐಡಿಯಾಗಳೇ ಇದೆ, ಈ ವಿಷಯ ಮದುವೆಗೆ ಮುಂಚೆ ತಿಳಿದಿದ್ದಕ್ಕೆ ನಾನು ಬಚಾವಾದೆ. ಇಲ್ಲದೇ ಇದ್ದಿದ್ದರೆ, ಗೌರವಯುತವಾದ ಶಿಕ್ಷಕರ ಮನೆಯ ಮಗಳಾದ ನಾನು ಕ್ರಿಮಿನಲ್ ಕುಟುಂಬದ ಸೊಸೆಯಾಗಬೇಕಿತ್ತು, ಥ್ಯಾಂಕ್ ಗಾಡ್‌ ಎಂದು ಆಶಾ ವಿಕ್ರಮ್ ನನ್ನು ಛೇಡಿಸುತ್ತಾಳೆ.
ಈ ಮಾತಿನಿಂದ ವಿಕ್ರಮ್ ಗೆ ತುಂಬಾ ಅವಮಾನವಾದಂತಾಗಿ, ಕೋಪದಿಂದ ಎಲ್ಲದಕ್ಕೂ ನಿಮ್ಮಪ್ಪ ನೀನು ಕಾರಣವೆಂದು ವಿಕ್ರಮ್ ದೂರಲು.
ಓ ಹೋ ನಾನೂ ನಮ್ಮಪ್ಪ ನಿಮಗೇನು ಮಾಡಿದ್ರಪ್ಪಾ ಎಂದು ಆಶಾ ವ್ಯಂಗ್ಯದಿಂದ ಕೇಳಿದಾಗ
ಅದನ್ನು ಪುನಃ ಬಿಡಿಸಿ ಹೇಳಬೇಕಾ? ಎಂದು ವಿಕ್ರಮ್ ಪ್ರಶ್ನಿಸುತ್ತಾನೆ.
ನಾನು ನಮ್ಮಪ್ಪ ಏನು ತಪ್ಪು ಮಾಡಿದ್ದೀವೋ ಗೊತ್ತಾಗುತ್ತಿಲ್ಲ. ನೀನು ಹೇಳಿದರೆ ತಿಳಿದುಕೊಳ್ಳುತ್ತೇನೆಂದು ಆಶಾ ಹೇಳಿದ ಮಾತಿಗೆ
ನಮ್ಮಣ್ಣ ನಿನ್ನನ್ನು ಕಿಡ್ನಾಪ್ ಮಾಡಿದ ಉದ್ದೇಶ‌ ಆಗಲೇ ಹೇಳಿದ್ದೇನೆ. ಈಗ ನೀನು ನನ್ನನ್ನು ಮದುವೆಯಾಗಲು ನಿರಾಕರಿಸುತ್ತಿರುವುದಕ್ಕೆ ನಿನ್ನ ಮೇಲೆ ಕೋಪ ಬಂದು ಆ ರೀತಿ ಹೇಳಿದೆ ಎಂದು ವಿಕ್ರಮ್ ಸಮರ್ಥಿಸಿಕೊಂಡಾಗ
ಅವರ ಗುಣಗಳನ್ನು ಮಾತಿನಿಂದ ಅಳೆಯಬಹುದು ನೀನು ನಿಮ್ಮ ಕ್ರಿನಿನಲ್ ಕೆಲಸಗಳನ್ನು ಸಮರ್ಥಿಸಿಕೊಳ್ಳಬೇಡಾ ಫೋನ್ ಆಫ್ ಮಾಡು, ಇನ್ನೆಂದೂ ನನಗೆ ಫೋನ್ ಮಾಡುವ ಸಾಹಸ ಮಾಡಬೇಡವೆಂದು ಹೇಳಿ ಆಶಾ ಫೋನ್ ಆಫ್ ಮಾಡುತ್ತಾಳೆ
ನಿನಗೆ ಎಷ್ಚಿದೆ ಕೊಬ್ಬು? ಅದನ್ನು ಇಳಿಸೇ ಇಳಿಸಿ ನಿನ್ನನ್ನು ಮದುವೆಯಾಗದೇ ಇದ್ದರೆ ನಾನು ವಿಕ್ರಮನೇ ಅಲ್ಲವೆಂದುಕೊಂಡು ಮೊಬೈಲನ್ನು ಜೇಬಿಗಿಟ್ಟುಕೊಳ್ಳುತ್ತಾನೆ.

ರಾತ್ರಿ ಅಪ್ಪ ಮಗಳು ಊಟ ಮಾಡುತ್ತಿರುವಾಗ,
ವಿಕ್ರಮ್ ತನಗೆ ಫೋನ್ ಮಾಡಿ ತುಂಬಾ ಇರಿಟೇಟ್ ಮಾಡುತ್ತಿದ್ದಾನೆಂದು ಆಶ‌ಾ ತನ್ನಪ್ಪನಿಗೆ ತಿಳಿಸಿದ ತಕ್ಷಣ
ಕೋದಂಡರಾಂ ರವರಿಗೆ ಕೋಪ ಬಂದು, ಇನ್ನೂ ಅವನ ಕಂತ್ರಿ ಬುದ್ದಿ ಬಿಟ್ಚಿಲ್ಲವಾ? ಈ ಹಿಂದೆ ನಿನ್ನ ಸುದ್ದಿಗೆ ಬರದಂತೆ ಅವನಿಗೆ ಎಚ್ಚರಿಕೆ ಕೊಡಲು ಇನ್ಸ್ ಪೆಕ್ಟರ್ ಗೆ ಹೇಳಿದಾಗ ನಿನ್ನ ಸಪೋರ್ಟ್ ಅವನಿಗಿತ್ತು, ಇನ್ಸ್ ಪೆಕ್ಟರ್ ಕೂಡಾ ಏನೂ ಮಾಡಲು ಆಗಲಿಲ್ಲ. ಈಗ ಅವನಿಗೆ ಸರಿಯಾಗಿ ರಿಪೇರಿ ಮಾಡಿಸುತ್ತೇನೆಂದು ಕೋದಂಡರಾಂ ಹೇಳಲು
ರೀ ಅದನ್ನೇ ದೊಡ್ಡದು ಮಾಡಿಕೊಂಡು ಹೋಗವುದು ಬೇಡಾ ರೀ, ಮಗಳಿಗೆ ಒಳ್ಳೆಯ ವರನನ್ನು ಹುಡುಕಿ ಮದುವೆ ಮಾಡಿದರೆ ಇವಳ ತಂಟೆಗೆ ಬರುವುದಿಲ್ಲವೆಂದಾಗ
ನಾನೂ ಎಲ್ಲಾ ಕಡೆಯೂ ಪ್ರಯತ್ನಿಸುತ್ತಿದ್ದೇನೆ ಸರಿಯಾದ‌ ವರ ಸಿಕ್ಕುತ್ತಿಲ್ಲವೆಂದು ಕೋದಂಡರಾಂ ಮಾತಿಗೆ
ಆರ್ಮಿ ಹುಡುಗ ಒಪ್ಪಿಕೊಂಡಿದ್ದೇನೆಂದು ಹೇಳಿದ್ದರಲ್ಲಾ, ಮಗಳನ್ನು ಕೇಳಿ, ಅವಳು ಒಪ್ಪಿದರೆ ಮದುವೆ ಮಾಡಬಹುದಲ್ಲಾ ಎಂದು ಅವರ ಪತ್ನಿ ಹೇಳಿದಾಗ
ಮಗಳು ಒಪ್ಪಿದರೆ ಸಂತೋಷವಾಗಿ ಮದುವೆ ಮಾಡಿಕೊಡುತ್ತೇನೆಂದು ಕೋದಂಡರಾಂ ಹೇಳಿದ ಮಾತಿಗೆ
ಅಮ್ಮಾ ನನಗೆ ಒಪ್ಪಿಗೆಯಮ್ಮಾ ಎಂದು ಆಶಾ ಹೇಳಿದ ತಕ್ಷಣ
ಕೋದಂಡರಾಂ ರವರಿಗೆ ಬಹಳ‌ ಸಂತೋಷವಾಗಿದ್ದು, ಈ ವಿಚಾರ‌ ಊಟಕ್ಕೆ ಮೊದಲೇ ಹೇಳಿದ್ದರೆ ಒಳ್ಳೆಯ‌ ಸ್ವೀಟು ಮಾಡಿಸಬಹುದಿತ್ತೆಂದು ಕೋದಂಡರಾಮ್ ಹೇಳಲು
ಈಗಲೂ ಸ್ವೀಟ್ ಬೇಕಾ ಹೇಳಿ ತಂದು ಕೊಡುತ್ತೇನೆಂದು ಅವರ ಪತ್ನಿಯ ಮಾತಿಗೆ
ಇನ್ನೂ ಕಣೀ ಕೇಳು, ಮಗಳು ಒಳ್ಳೆಯ ಡಿಸಿಷನ್ ಹೇಳಿದ್ದಾಳೆ, ಮನೆಯಲ್ಲಿ ಇದ್ದರೆ ಬೇಗ ಸ್ವೀಟ್‌ ತಂದು ಹಾಕು ಎಂದು ಹೇಳುತ್ತಾರೆ.
ಅವರ ಪತ್ನಿ ಅಡಿಗೆ ಮನೆಗೆ ಹೋಗಿ ಕೊಬ್ಬರಿ ಮಿಠಾಯಿ ತಂದು ತಟ್ಟೆಗೆ ಹಾಕಲು
ಓ ಅಡ್ವಾನ್ಸ್ ಆಗಿ ಸ್ವೀಟ್ ಮಾಡಿದ್ದೀಯಾ ಪರವಾಗಿಲ್ಲವೇ‌ ಇನ್ನೊಂದು ಪೀಸ್ ಹಾಕೆಂದು ಕೋದಂಡರಾಂ ಕೇಳಿದಾಗ
ಅಪ್ಪಾ ಜಾಸ್ತಿ ಸ್ವೀಟ್ ತಿನ್ನಬೇಡವೆಂದು ಆಶಾ‌ಳ‌ ಮಾತಿಗೆ
ನೀನು ಸುಮ್ಮನಿರಮ್ಮಾ , ನನಗೇನೂ ಸಕ್ಕರೆ ಖಾಯಿಲೆ ಬಂದಿಲ್ಲ, ನಿನ್ನ ಮದುವೆಯಲ್ಲಿ ಇನ್ನೂ ಎಷ್ಟೊಂದು ಸ್ವೀಟ್ ತಿನ್ನಬೇಕು ನನಗೆ ಅಡ್ಡಿ ಪಡಿಸಬೇಡವೆಂಬ ಕೋದಂಡರಾಂ ಮಾತಿಗೆ
ಮದುವೆಯಲ್ಲಿ ಬೇಕಾದರೆ ತಿನ್ನಿವಂತೆ ಈಗ‌ ಒಂದು ಪೀಸ್ ಸಾಕೆಂದು ಆಶಾ ಹೇಳುತ್ತಾಳೆ
ಆಗಲಮ್ಮಾ ನೀನು ಮದುವೆಗೆ ಒಪ್ಪಿದೆಯಲ್ಲಾ ಅಷ್ಟು‌ಸಾಕೆಂದು ಕೋದಂಡರಾಂ ರವರು ನಗುತ್ತಾ, ತಟ್ಟೆಗೆ ಹಾಕಿದ್ದ ಸಿಹಿಯನ್ನು ತಿಂದು ಕೈ ತೊಳೆದುಕೊಂಡು ಟವಲಿನಿಂದ ಕೈ ಒರೆಸಿಕೊಳ್ಳುತ್ತಾ, ನಮಗೆ ನಿಮ್ಮ ಮಗಳನ್ನು ನಮ್ಮ ಮನೆಯ ಸೊಸೆ ಮಾಡಿಕೊಳ್ಳಲು ಆರ್ಮಿ ಹುಡುಗನ ತಂದೆ ನಮಗೆ ಒಪ್ಪಿಗೆ ಇದೆ, ನಿಮ್ಮ ಅಭಿಪ್ರಾಯವನ್ನು ಬೇಗ ತಿಳಿಸಿರೆಂದು ಗಂಡಿನ ಕಡೆಯವರು ಫೋನ್ ಮಾಡಿ ಹದಿನೈದು ದಿನಗಳಾಗಿದೆ, ಈಗಲೇ ಅವರಿಗೆ ಫೋನ್ ಮಾಡಿ ನಮ್ಮ ಮಗಳು ಮದುವೆಗೆ ಒಪ್ಪಿರುವಳೆಂದು ತಿಳಿಸಿ ಕನ್ಫರ್ಮ್ ಮಾಡುತ್ತೇನೆ ಎನ್ನುತ್ತಾ, ತಕ್ಷಣ ಆರ್ಮಿ ಹುಡುಗನ ತಂದೆಗೆ ಫೋನ್ ಮಾಡಿದಾಗ
ಯಾರು ಮಾತನಾಡುತ್ತಿರುವುದೆಂದು ಹುಡುಗನ ಅಪ್ಪ ಕೇಳಲು
ನಾನು ಸಾರ್ ಗೌರ್ನಮೆಂಟ್ ಸ್ಕೂಲ್ ಟೀಚರ್ ಕೋದಂಡರಾಂ ಎಂದಾಗ
ಓ ಮೇಷ್ಟ್ರು ಕೋದಂಡರಾಂ ರವರಾ? ಚೆನ್ನಾಗಿದ್ದೀರಾ ಸಾರ್? ಏನು ಸಮಾಚಾರ‌ ಎಂದು ಹುಡುಗನ ಅಪ್ಪ ಕೇಳಲು
ಕೋದಂಡರಾಂ ರವರಿಗೆ ಸ್ವಲ್ಪ ಮುಜುಗರವಾಗುತ್ತದೆ. ಛೇ ಏನು ಸಮಾಚಾರ ಎಂದು ಕೇಳುತ್ತಿದ್ದಾರೆ, ಇವರಿಗೆ ಹೇಗೆ ವಿಷಯ ತಿಳಿಸಬೇಕೆಂದು ಗೊಂದಲವಾಗಿ, ಸಾರ್ ಅದೂ ,,, ಎನ್ನಲು
ಏನು ಹೇಳಿ ಪರವಾಗಿಲ್ಲವೆಂದು ಹುಡುಗನ ತಂದೆ ತಿಳಿಸಿದಾಗ
ಅದೇ ಸಾರ್ ನನ್ನ ಮಗಳನ್ನು ನಿಮ್ಮ ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳುತ್ತೇನೆಂದು,,, ಎನ್ನುವುದರೊಳಗೆ
ಓ ಅದಾ,,,,, ಆ ದಿನ ನಾನು ಹೇಳಿದ್ದೇನೋ ನಿಜ ಆದರೆ ನೀವು ಉತ್ತರವನ್ನೇ ಕೊಡಲಿಲ್ಲವೆಂದಾಗ
ಸಾರಿ ಸಾರ್ ನಾನು ಯಾವುದೋ ತುರ್ತು ಕೆಲಸದಲ್ಲಿದ್ದೆ, ತಿಳಿಸಲು ಆಗಲಿಲ್ಲವೆನ್ನುತ್ತಾರೆ‌ ಕೋದಂಡರಾಂ.
ಹೌದೂ ಸ್ವಾಮೀ, ಮೊದಲು ಗಂಡಿನ ಕಡೆಯವರು ಎಂದರೆ ಸ್ವಲ್ಪ‌ ಅಟ್ಟದ‌ ಮೇಲೆ ಇರುತ್ತಿದ್ದರು ಅವರನ್ನು ಇಳಿಸಬೇಕಾದರೆ ಹೆಣ್ಣಿನ ತಂದೆ ತಾಯಿಗೆ ಸಾಕು ಸಾಕಾಗಿ ಹೋಗುತ್ತಿತ್ತು, ಈಗ ಹೆಣ್ಣಿನವರ ಸರದಿಯಾಗಿದೆ, ನೀವು ಹೇಳಿದಂತೆ ನಾವು ಕೇಳಬೇಕಾಗಿದೆ ಎನ್ನಲು
ನಾವು ಹಾಗೇನೂ ಇಲ್ಲಾ ಸ್ವಾಮಿ ನಮ್ಮ ಅಭಿಪ್ರಾಯ ತಿಳಿಸಲು ಸ್ವಲ್ಪ ತಡವಾಯಿತು ಎಂದು ಕೋದಂಡರಾಮ್ ಹೇಳಲು
ನಿಮ್ಮ ಅಭಿಪ್ರಾಯಕ್ಕಾಗಿ ನನ್ನ ಮಗ ಕಾಯುತ್ತಲಿದ್ದ, ನೀವು ತಿಳಿಸುವುದು ತಡವಾಗಿದ್ದಕ್ಕೆ ನನ್ನ ಮಗನಿಗೆ ಕೆಲಸಕ್ಕೆ ಬರುವಂತೆ ಕಾಲ್ ಬಂತು ಹೊರಟು ಬಿಟ್ಟ ಎಂದ ತಕ್ಷಣ
ಯಾವಾಗ ಬರುತ್ತಾರೆಂದು ಕೋದಂಡರಾಂ ಪ್ರಶ್ನಿಸುತ್ತಾರೆ.

ಮುಂದುವರೆಯುತ್ತದೆ

  • ಈ ಸಂಚಿಕೆಯಿಂದ ತಿಳಿದು ಬರುವ ಮುಖ್ಯವಾದ ಅಂಶವೇನೆಂದರೆ

ಯಾವ‌ ವಿಷಯಕ್ಕಾದರೂ ಬೇರೆಯವರ ಬಳಿ ಕಮಿಟ್ ಆಗಬೇಕಾದರೆ ಯೋಚಿಸಿ ನಿರ್ಧರಿಸಬೇಕು, ವ್ಯವಹಾರವೇನಾದರೂ ಕಂಪ್ಲೀಟ್‌ ಆದರೆ ಯಾವುದೇ ಯೋಚನೆ ಇರುವುದಿಲ್ಲ. ಅಕಸ್ಮಾತ್ ಅಪ್ಪಿತಪ್ಪಿ ವ್ಯವಹಾರದಲ್ಲಿ ಏರುಪೇರಾದರೆ ಅದರಿಂದ ಹೊರಬರುವುದು ಬಹಳ‌ ಕಷ್ಟ. ಒಂದು ಕೋರ್ಟಿಗೆ ಹೋಗಿ ಬಗೆಹರಿಸಿಕೊಳ್ಳಬೇಕು ಇಲ್ಲವೇ ನಷ್ಟವಾದರೂ ಹೋದರೆ ಹೋಗಲೆಂದು ಸುಮ್ಮನಿರಬೇಕಾಗುತ್ತದೆ.