ಸಾಧನೆಯ ಹಾದಿಯಲ್ಲಿ ಸೌಮ್ಯಶ್ರೀ ಸುದರ್ಶನ್ ಹಿರೇಮಠ
“ಜೀವನ ಇರುವುದು ಸಾಗಿಸುವುದಕ್ಕಲ್ಲ, ಸಾಧಿಸುವುದಕ್ಕೆ” ಎಂಬ ವಾಕ್ಯವನ್ನು ಧ್ಯೇಯವಾಗಿಟ್ಟುಕೊಂಡು ಸೌಮ್ಯಶ್ರೀ ಸುದರ್ಶನ ಹಿರೇಮಠರವರು 06 – 09 – 1994 ರಂದು ರಾಯಚೂರಿನಲ್ಲಿ ರಾಚಯ್ಯಸ್ವಾಮಿ ಸರಗಣಾಚಾರಿ ಹಾಗೂ ಶಾರದಾ ಸರಗಣಾಚಾರಿ ದಂಪತಿಗಳಿಗೆ ಜನಿಸಿದರು. ಮೂಲತಃ ಇವರು ರಾಯಚೂರು ಜಿಲ್ಲೆ ಲಿಂಗಸ್ಗೂರು ತಾಲ್ಲೂಕಿನ ಮುದಗಲ್ ಗ್ರಾಮದವರು. ತಂದೆ ಭವಾನಿ ಏಜೆನ್ಸಿ ವೃತ್ತಿಯಿಂದ ನಿವೃತ್ತಿ ಹೊಂದಿದ್ದು, ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತಿ ಸುದರ್ಶನ ಹಿರೇಮಠರವರು ಸೋಲಾರ್ ಇಂಜಿನಿಯರ್ ಆಗಿ ಬೆಂಗಳೂರುನಲ್ಲಿ ಉದ್ಯೋಗದಲ್ಲಿದ್ದಾರೆ. ಹಿರಿಯ ಸಹೋದರ ವಿಶ್ವರಾಧ್ಯ ಸರಗಣಾಚಾರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಕಿರಿಯ ಸಹೋದರ ಶಶಿಧರ ಸರಗಣಾಚಾರಿ ವಿಜ್ಞಾನ ಪದವಿ ಕೊನೆಯ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಸೌಮ್ಯಶ್ರೀರವರಿಗೆ ಚಿಕ್ಕಂದಿನಿಂದಲೂ ಗಣಿತ ವಿಷಯವೆಂದರೆ ಅಚ್ಚುಮೆಚ್ಚು. ಭಾಷಣವೇ ಅವರ ಜೀವನ ಮಂತ್ರ. ಕನ್ನಡ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳುವುದೆಂದರೆ ಪ್ರೀತಿ.
-
ಶೈಕ್ಷಣಿಕ ವಿವರಗಳು:-
- ಶ್ರೀಮತಿ ಸೌಮ್ಯಶ್ರೀ ಸುದರ್ಶನರವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಲಿಂಗಸ್ಗೂರಿನ ಶ್ರೀ ಅಕ್ಕಮಹಾದೇವಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (2000 ರಿಂದ 2007) 7ನೇ ತರಗತಿ 97 ಶೇಕಡ (582/600) ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
- ಪ್ರೌಢ ವಿದ್ಯಾಭ್ಯಾಸವನ್ನು ಲಿಂಗಸ್ಗೂರಿನ ಶ್ರೀ ಅಮರೇಶ್ವರ ಬಾಲಕಿಯರ ಪ್ರೌಢ ಶಾಲೆಯಲ್ಲಿ(2007 ರಿಂದ 2010) 10 ನೇ ತರಗತಿಯಲ್ಲಿ ಶೇಕಡ12 (557/625)ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.
- ಪಿಯುಸಿ ವಿದ್ಯಾಭ್ಯಾಸವನ್ನು ಲಿಂಗಸ್ಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ (2010 ರಿಂದ 2012) ದ್ವಿತೀಯ ಪಿಯುಸಿಯಲ್ಲಿ ಶೇಕಡ33 (422/600) ಅಂಕ ಗಳಿಸುವುದರ ಮೂಲಕ ತೇರ್ಗಡೆಯಾಗಿದ್ದಾರೆ.
- ಬಿ.ಎಸ್ಸಿ. ಪದವಿ ವಿದ್ಯಾಭ್ಯಾಸವನ್ನು ರಾಯಚೂರಿನ ಎಲ್.ವಿ.ಡಿ ಕಾಲೇಜಿನಲ್ಲಿ (2012 ರಿಂದ 2015) 86.57 (4069/4700) ಶೇಕಡ ಅಂಕಗಳನ್ನು ಗಳಿಸಿ ಪಡೆದು ಉತ್ತೀರ್ಣರಾಗಿದ್ದಾರೆ.
- ಎಂ.ಎಸ್ಸಿ ಯಲ್ಲಿ ಗಣಿತ ವಿಷಯವನ್ನು ತೆಗೆದುಕೊಂಡು ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ (2015 ರಿಂದ 2017) ಶಿಕ್ಷಿತರಾಗಿ ಶೇಕಡ83 (2156/2400) ಅಂಕಗಳನ್ನು ಪಡೆದು “ಚಿನ್ನದ ಪದಕ” ಕೂಡ ಪಡೆದಿದ್ದಾರೆ.
-
ಸ್ವರಚಿತ ಪುಸ್ತಕಗಳು:-
- ಭಾಷಣ ಸಿಂಧು – ಪ್ರಬಂಧ ಸಂಕಲನ – 2010
- ಮೌನ ಮಾತಾಗದಿದ್ದಾಗ – ಕಥಾ ಸಂಕಲನ – 2016
- ಏನೆಂದು ಹೆಸರಿಡಲಿ..? – ಲೇಖನ ಸಂಕಲನ – 2016
-
ಪ್ರಶಸ್ತಿಗಳು & ಗೌರವಗಳು:-
-
ಕರ್ನಾಟಕ ಚೇತನ ರಾಜ್ಯ ಪ್ರಶಸ್ತಿ (2013)
ಚಿಕ್ಕಂದಿನಿಂದ ಭಾಷಣ ಕಲೆಯನ್ನು ಕರಗತ ಮಾಡಿಕೊಂಡಿರುವ ಸೌಮ್ಯಶ್ರೀರವರು 2010 ರಲ್ಲಿ 10 ನೇ ತರಗತಿ ಓದುತ್ತಿರುವಾಗಲೇ “ಭಾಷಣ ಸಿಂಧು” ಎನ್ನುವ ಪ್ರಬಂಧ ಸಂಕಲನವನ್ನು ರಚಿಸಿದ್ದು 2012ರಲ್ಲಿ ಹೊರತಂದಿದ್ದಾರೆ. ಈ ಸಾಧನೆಯನ್ನು ಗುರುತಿಸಿ ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿರವರು 2013 ರಲ್ಲಿ “ಕರ್ನಾಟಕ ಚೇತನ” ಎನ್ನುವ ರಾಜ್ಯ ಪ್ರಶಸ್ತಿ ಜೊತೆಗೆ “ಕರ್ನಾಟಕ ಚೇತನ” ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ.
-
Meritorious All Rounder Award (2015)
ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಓದುವುದರಲ್ಲೂ ಮುಂಚೂಣಿಯಲ್ಲಿದ್ದು, ಭಾಷಣ, ಪ್ರಬಂಧ, ಉಪನ್ಯಾಸ, ಚರ್ಚಾಸ್ಫರ್ಧೆ, ಭರತನಾಟ್ಯ, ಆಟೋಟ ಎಲ್ಲದರಲ್ಲೂ ಕಾಲೇಜಿಗೆ ಕೀರ್ತೀ ತರುತ್ತಿದ್ದ ಸೌಮ್ಯಶ್ರೀರವರಿಗೆ 2015 ನೇ ಸ್ವಾತಂತ್ರ್ಯ ದಿನಾಚರಣೆಯಂದು “Talented in all fields and intelligent student” ಅರ್ಹತೆಯನ್ನಾಧರಿಸಿ “Meritorious All Rounder Award” ನೀಡಿರುತ್ತಾರೆ.
-
ಯುವ ಪ್ರಶಸ್ತಿ (2015)
ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ “ಚವ್ಹಾಣ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ” ಶಹಬಾದ್ ರವರು ಸೌಮ್ಯಶ್ರೀರವರ ಸಾಹಿತ್ಯ ಮತ್ತು ಕಲೆ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ “ಯುವ ಪ್ರಶಸ್ತಿ” ಯನ್ನು ನೀಡಿ ಗೌರವಿಸಿದ್ದಾರೆ.
-
ಶ್ರೇಷ್ಠ ಪ್ರತಿಭೆ ಪ್ರಶಸ್ತಿ (2015)
2015 ರಲ್ಲಿ ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಬೇಡರಕಾರಲಕುಂಟಿಯಲ್ಲಿ ಜರಿಗಿದ ಶ್ರೀ ಪರಮಪೂಜ್ಯ ಶ್ರೀ ರುದ್ರಮುನಿ ಮಹಾಸ್ವಾಮಿಗಳ ಕಾಲಜ್ಞಾನ ಮಠದ ಜಾತ್ರಾ ಮಹೋತ್ಸವದ ನಿರಂತರ ಮಾಸಿಕ ಧಾರ್ಮಿಕ ದಾಸೋಹದ ವಾರ್ಷಿಕೋತ್ಸವ ಹಾಗೂ ಸರ್ವಧರ್ಮ ಸಮ್ಮೇಳನದಲ್ಲಿ ಸೌಮ್ಯಶ್ರೀರವರ ಬಹುಮುಖ ಪ್ರತಿಭೆಯ ಸಾಧನೆಯನ್ನು ಗುರುತಿಸಿ “ಶ್ರೇಷ್ಠ ಪ್ರತಿಭೆ” ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
-
ಚಿನ್ನದ ಪದಕ (2017)
ಎಂ.ಎಸ್ಸಿ ಗಣಿತ ವಿಭಾಗದಲ್ಲಿ Computational Numerical Methods ವಿಷಯದಲ್ಲಿ 188/200 (94%) ಅಂಕ ಪಡೆದು ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಬಂದಿದ್ದು, ಚಿನ್ನದ ಪದಕವನ್ನು ಪಡೆದಿದ್ದಾರೆ.
-
ಆಯ್ಕೆಗೊಂಡ ಕೃತಿಗಳು
ಸೌಮ್ಯಶ್ರೀ ಸ್ವರಚಿತ ಕೃತಿಗಳಾದ “ಭಾಷಣ ಸಿಂಧು” ಹಾಗೂ “ಏನೆಂದು ಹೆಸರಿಡಲಿ?” ಕೃತಿಗಳು ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಆಯ್ಕೆಗೊಂಡಿವೆ.
-
ಸಾಧನೆಗಳು: –
- 2012 ಅಕ್ಟೋಬರ್ನಲ್ಲಿ ಲಿಂಗಸ್ಗೂರಿನಲ್ಲಿ ನಡೆದ ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾ ತಾಲ್ಲೂಕು ಮಟ್ಟದ ಸಭೆಯಲ್ಲಿ ಸೌಮ್ಯಶ್ರೀ ನೀಡಿದ ಉಪನ್ಯಾಸ ಕೇಳಿ, ಮೆಚ್ಚಿದ ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾದ ರಾಜ್ಯಾಧ್ಯಕ್ಷರು ಶ್ರೀ ಎಸ್. ಆರ್.ನವಲಿ ಹಿರೇಮಠ ರವರು ಸೌಮ್ಯಶ್ರೀ ರವರನ್ನು ಶೈಕ್ಷಣಿಕ ದತ್ತು ತೆಗೆದುಕೊಂಡು ಅವಳ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ಭರಿಸಲು ಒಪ್ಪಿ ಪದವಿಯಿಂದ , ಸ್ನಾತಕೊತ್ತರ ಪದವಿಯ ಶೈಕ್ಷಣಿಕ ಖರ್ಚನ್ನು ಭರಿಸಿದರು.
- 2014 ರಲ್ಲಿ ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಮಸ್ಕಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ಕನ್ನಡ ಮತ್ತು ಕರುನಾಡು” ಕುರಿತು ಉಪನ್ಯಾಸ & ಸನ್ಮಾನ.
- ರಾಯಚೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ 2014 ರಲ್ಲಿ ನಡೆದ ಜಿಲ್ಲಾ ಮಟ್ಟದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯಲ್ಲಿ ಉಪನ್ಯಾಸವನ್ನು ನೀಡಿ ಸನ್ಮಾನಿತರಾಗಿದ್ದಾರೆ.
- ರಾಯಚೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ 2014 ರಲ್ಲಿ ನಡೆದ ಜಿಲ್ಲಾ ಮಟ್ಟದ ‘ಬಸವ ಜಯಂತಿ’ ಕಾರ್ಯಕ್ರಮದಲ್ಲಿ ಬಸವಣ್ಣನವರನ್ನು ಕುರಿತು ನೀಡಿದ ಅತ್ಯುತ್ತಮ ಉಪನ್ಯಾಸಕ್ಕೆ ಜಿಲ್ಲಾಧಿಕಾರಿ ಶ್ರೀ ನಾಗರಾಜ್ರವರು ಪ್ರಶಂಸಿಸಿ ಸನ್ಮಾನ ಮಾಡಿರುತ್ತಾರೆ.
- 2014 ಮಾರ್ಚ್ನಲ್ಲಿ ನಡೆದ ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ‘ಎಕ್ಸ್ಲೆಂಟ್ ಪ್ರಾಥಮಿಕ ಶಾಲೆ’ಯ ಪ್ರಥಮ ವರ್ಷದ ವಾರ್ಷಿಕೋತ್ಸವಕ್ಕೆ ಸೌಮ್ಯಶ್ರೀರವರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ “ಮಕ್ಕಳನ್ನು ಬೆಳೆಸುವ ಬಗೆ” ವಿಷಯ ಕುರಿತು ಉಪನ್ಯಾಸ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಸನ್ಮಾನಿತರಾಗಿರುತ್ತಾರೆ.
- 2013 ರಲ್ಲಿ ಮೂಡಬಿದಿರೆಯ ಮಹಾನ್ ಶಿಕ್ಷಣ ಸಂಸ್ಥೆ ಆಳ್ವಾಸ್ನಲ್ಲಿ ನಡೆಯುವ ಕರ್ನಾಟಕದ ಅತಿದೊಡ್ಡ ಕಾರ್ಯಕ್ರಮಗಳಲ್ಲೊಂದಾದ “ಆಳ್ವಾಸ್ ನುಡಿಸಿರಿ ವಿರಾಸತ್” ನ ವಿದ್ಯಾರ್ಥಿಸಿರಿಗೆ ಆಯ್ಕೆಯಾಗಿ, ಕಥನ ಕುತೂಹಲ ನಡೆಸಿಕೊಟ್ಟು, ಗೌರವ ಸನ್ಮಾನಗಳಿಗೆ ಪಾತ್ರರಾಗಿದ್ದಾರೆ.
- 2015 ರಲ್ಲಿ ಚಿತ್ತಾಪುರದ ಎರಡು ಸಂಸ್ಥೆಗಳಲ್ಲಿ ಕಾರ್ಗಿಲ್ ವಿಜಯ ದಿವಸ ಕುರಿತು ಉಪನ್ಯಾಸ ನೀಡಿರುತ್ತಾರೆ.
- 2015 ರಲ್ಲಿ ಮೂಡಬಿದಿರೆಯ ಆಳ್ವಾಸ್ ನುಡಿಸಿರಿ ಕಾರ್ಯಕ್ರಮಕ್ಕೆ ಮತ್ತೊಮ್ಮೆ ಆಯ್ಕೆಯಾಗಿ, “ಯುವಜನತೆ ಮತ್ತು ಭಾರತ” ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ, ಪ್ರಶಸ್ತಿ ಪಡೆದಿರುತ್ತಾರೆ.
- 2016 ರಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನಲ್ಲಿ ನಡೆದ ತಾಲೂಕಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸಿ ಸ್ವರಚಿತ “ಯೋಧರಿಗೊಂದು ನಮನ” ಕವನ ವಾಚನ ಮಾಡಿರುತ್ತಾರೆ.
- 2016 ರಲ್ಲಿ ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕಿನಲ್ಲಿ ನಡೆದ ತಾಲೂಕಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಸ್ವರಚಿತ “ಕನಸುಗಳಿಗೂ ಕಾಲುಂಟು” ಮತ್ತು “ಯೋಧರಿಗೊಂದು ನಮನ” ಕವನ ವಾಚನ ಮಾಡಿ, ಸನ್ಮಾನಿತರಾಗಿರುತ್ತಾರೆ.
- 2017 ರಲ್ಲಿ ರಾಯಚೂರಿನ ಲಿಂಗಸ್ಗೂರಿನಲ್ಲಿ ಯುವ ಬ್ರಿಗೇಡ್ನವರು ನಡೆಸಿದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿರುತ್ತಾರೆ.
- 2018ರಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗೊಣ್ಣಿಗನೂರು ಸರ್ಕಾರಿ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಉಪನ್ಯಾಸ ನೀಡಿರುತ್ತಾರೆ.
- 2018 ರಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಎರಡು ಪದವಿ ಪೂರ್ವ ಶಿಕ್ಷಣ ಸಂಸ್ಥಗಳಲ್ಲಿ ಯುವ ಬ್ರಿಗೇಡ್ ತಂಡ ನಡೆಸಿದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮಕ್ಕೆ ಮುಖ್ಯ ಉಪನ್ಯಾಸಕಿಯಾಗಿ ಭಾಗಿಯಾಗಿ ಅದ್ಭುತ ಉಪನ್ಯಾಸ ನೀಡಿ, ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.
- 2018 ರಲ್ಲಿ ಯಾದಗಿರಿ ಜಿಲ್ಲೆಯ ಶಹಪೂರ ತಾಲೂಕಿನ ಶ್ರೀ ಸೂಗೂರೇಶ್ವರ ಮಠದಲ್ಲಿ ಜರುಗಿದ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ನಿರೂಪಣೆ, ಮಹಿಳೆಯರ ಸಬಲೀಕರಣ ಕುರಿತು ಉಪನ್ಯಾಸ ನೀಡಿ ಗೌರವಯುತ ಸನ್ಮಾನವನ್ನು ಪಡೆದಿರುತ್ತಾರೆ.
- ಶಾಲಾ ಕಾಲೇಜುಗಳಲ್ಲಿ ಭಾಷಣ, ಚರ್ಚಾಸ್ಫರ್ಧೆ, ಆಶುಭಾ಼ಷಣ, ಪ್ರಬಂಧ, ಕ್ವಿಜ್, ವಿಜ್ಞಾನ ಉಪನ್ಯಾಸ, ಚೆಸ್, ನೃತ್ಯ ಮುಂತಾದ ಸ್ಫರ್ಧೆಗಳಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟ, ರಾಜ್ಯ ಮಟ್ಟಗಳಿಗೆ ಆಯ್ಕೆಗೊಂಡು ಸಾಕಷ್ಟು ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.
-
Achievements in Media:-
- ರಾಜ್ಯದ ಹೆಸರಾಂತ ಪತ್ರಿಕೆಗಳಾದ ಉದಯವಾಣಿ, ವಿಜಯವಾಣಿ, ಕರ್ಮವೀರಗಳಲ್ಲಿ ಹಾಗೂ ರಾಯಚೂರಿನ ಸುದ್ದಿಮೂಲ, ರಾಯಚೂರು ವಾಹಿನಿ, ರಾಯಚೂರು ವಾಣಿ ಮುಂತಾದವುಗಳಲ್ಲಿ ಸೌಮ್ಯಶ್ರೀರವರ ನೂರಾರು ಕಥೆ , ಲೇಖನಗಳು ಪ್ರಕಡಗೊಂಡಿವೆ.
- ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿಗಳಲ್ಲಿ “ಹೈದ್ರಾಬಾದ್ ಕರ್ನಾಟಕ”, “ಭಾರತ ಮತ್ತು ಯುವಜನತೆ”, “ಸ್ವಾಮಿ ವಿವೇಕಾನಂದ”, “ಡಾ.ಎ.ಪಿ.ಜೆ.ಅಬ್ದುಲ್ ಕಲಾಂ” ಮುಂತಾದ ವಿಷಯಗಳ ಕುರಿತು ಹಲವಾರು “ಯುವವಾಣಿ” ಕಾರ್ಯಕ್ರಮಗಳನ್ನು ನೀಡಿರುತ್ತಾರೆ. “ಯುವವಾಣಿ-ಯುವಕವಿ” ಕಾರ್ಯಕ್ರಮದಲ್ಲಿ ಸೌಮ್ಯಶ್ರೀರವರ ಸಂದರ್ಶನ ಕೂಡ ಪ್ರಸಾರವಾಗಿದೆ.
- ಸೌಮ್ಯಶ್ರೀ ಸ್ವರಚಿತ ಹಲವಾರು ಕಥೆಗಳು ಕಸ್ತೂರಿ ವಾಹಿನಿಯ ಧಾರವಾಹಿಗೆ ಆಯ್ಕೆಗೊಂಡು “ಮೌನ ಮಾತಾದಾಗ” ಶೀರ್ಷಿಕೆಯಡಿ ಧಾರವಾಹಿಗಳಾಗಿ ಪ್ರಸಾರಗೊಂಡಿವೆ.
- 2013ರಲ್ಲಿ ಸ್ವರಚಿತ “ಪವಿತ್ರ ಸಂಬಂಧ” ಕಥೆಗೆ ಕಸ್ತೂರಿ ವಾಹಿನಿಯ “ಮೌನ ಮಾತಾದಾಗ” ಧಾರಾವಾಹಿಯಲ್ಲಿ ಸಹೋದರ ಮತ್ತು ತಂದೆಯ ಜೊತೆಗೆ ಸೌಮ್ಯಶ್ರೀ ನಟಿಸಿರುತ್ತಾರೆ.
- 2020ರಲ್ಲಿ ಕಸ್ತೂರಿ ವಾಹಿನಿಯ ರಿಯಾಲಿಟಿ ಶೋ “ಚಿನ್ನದ ಬೇಟೆ”ಯಲ್ಲಿ ಭಾಗವಹಿಸಿರುತ್ತಾರೆ.
- ಚಿನ್ನದ ಬೇಟೆ ರಿಯಾಲಿಟಿ ಶೋ ನ ಜಾಹೀರಾತು (ಪ್ರೋಮೊ)ನಲ್ಲಿ ಸೌಮ್ಯಶ್ರೀರವರು ಪತಿಯೊಂದಿಗೆ ಅಭಿನಯಿಸಿರುತ್ತಾರೆ.
ಪ್ರಸ್ತುತ ಸೌಮ್ಯಶ್ರೀರವರು ಬೆಂಗಳೂರಿನ ಕರ್ನಾಟಕ ವಿದ್ಯುತ್ ಕಾರ್ಖಾನೆಯಲ್ಲಿ ‘ಸಹಾಯಕರು’ ಆಗಿ ನೇಮಕಾತಿಗೊಂಡಿದ್ದು ಈ ವಿದ್ಯುತ್ ಪರಿವರ್ತಕಗಳ ತಯಾರಿಕಾ ಸರ್ಕಾರಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.