ದಿನಾಂಕ 29 -8 -2024 ರಂದು ಶುಭ ಸಂಜೆಯಲ್ಲಿ ಶ್ರೇಷ್ಠ ಗುರುಗಳು ಹಾಗೂ ಆದರ್ಶ ಶಿಕ್ಷಕರಾಗಿದ್ದ ದಿ, ಶ್ರೀ ಚಂದ್ರಭಟ್ಟ ಜೋಷಿಯವರ ಸ್ಮರಣಾರ್ಥವಾಗಿ ಕೆಂಭಾವಿಯಲ್ಲಿ ಜೋಷಿ ಸಾಹಿತ್ಯ ವೇದಿಕೆ ವತಿಯಿಂದ ಸಾಹಿತ್ಯ ಹಾಗೂ ಶೈಕ್ಷಣಿಕ ಸೇವೆಗಾಗಿ ಅವರ ಶಿಷ್ಯನಾದ ಶ್ರೀಯುತ ನಿಂಗಣಗೌಡ ದೇಸಾಯಿ ಅವರಿಗೆ “ಜ್ಞಾನಚಂದ್ರ ಪ್ರಶಸ್ತಿ” ನೀಡಿ ಜೋಶಿ ಕುಟುಂಬದ ಸರ್ವಸದಸ್ಯರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕೆಂಭಾವಿಯ ಹಿರಿಯ ಗಣ್ಯರಾದ ಶ್ರೀ ವಾಮನ ರಾವ್ ದೇಶಪಾಂಡೆಯವರು, ಕೂಡಲಗಿಯ ಶ್ರೀ ಗಣಪತಿ ಮಹಾರಾಜರು ಹಾಗೂ ಶ್ರೀಪಾದಭಟ್ಟರು ಮತ್ತು ಶ್ರೀ ವಲ್ಲಭಭಟ್ಟರು ಹಾಗೂ ಶ್ರೀ ಗುಂಡಭಟ್ಟಜೋಶಿ ರವರು ಉಪಸ್ಥಿತರಿದ್ದರು, ನಿಂಗಣಗೌಡ ದೇಸಾಯಿ ಅವರ ಅಳಿಲು ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದರು. ದೇಸಾಯಿ ಅವರು ಜೋಶಿ ಕುಟುಂಬದ ಎಲ್ಲಾ ಪರಿವಾರದವರಿಗೂ ಅನಂತ ವಂದನೆಗಳನ್ನು ಹಾಗೂ ಸಮಾರಂಭದಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡಿದ ಎಲ್ಲಾ ಹಿರಿಯರಿಗೂ, ಹಿತೈಷಿಗಳಿಗೂ, ವರದಿಗಾರ ಮಿತ್ರರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.
ನಿಂಗಣಗೌಡ ದೇಸಾಯಿ ಅವರಿಗೆ ‘ಜ್ಞಾನಚಂದ್ರ ಪ್ರಶಸ್ತಿ’ ಪ್ರದಾನ
Related Posts
ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿಗಳ ಪುಣ್ಯಸ್ಮರಣೆ
ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿಗಳ ಪುಣ್ಯಸ್ಮರಣೆ ದಿನಾಂಕ 4 / ಜನವರಿ 2025 ರಂದು ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಜ್ಞಾನಯೋಗಶ್ರಮ ವಿಜಯಪುರ ಇವರ ಎರಡನೇ ವರ್ಷದ ಪುಣ್ಯ…
Read moreಕೇಂದ್ರ ಸರ್ಕಾರಿ ಹುದ್ದೆಗಳನ್ನು ಗಿಟ್ಟಿಸಿಕೊಂಡ ಬೈಲವಾಡ ಗ್ರಾಮದ ಯುವಕರು
ಕೇಂದ್ರ ಸರ್ಕಾರಿ ಹುದ್ದೆಗಳನ್ನು ಗಿಟ್ಟಿಸಿಕೊಂಡ ಬೈಲವಾಡ ಗ್ರಾಮದ ಯುವಕರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದಲ್ಲಿ ಕು :: ಶಿದ್ದಾರೂಢ ಶಂ ಕಲ್ಲಪ್ಪಗೌಡರ CISF ಕು :: ವಿನಾಯಕ ರು ನಾಯ್ಕ್ CTPF ಕು:: ಸಮರ್ಥ ಬ ಅರಳಿಕಟ್ಟಿ POST…
Read more