ದುರಂತ – ಸಂಕಟ

ಯಾರೋ ಮಾಡಿದ ಪಾಪತನದ ಕೂಪ
ಇನ್ನರೋ ಅನುಭವಿಸೋ ಯಾತನಾಮಯ ಶಾಪ !
ಪ್ರಕೃತಿಯ ಮುನಿಸಿನ ರುದ್ರಾಕೋಪ !
ಅನುಭವಿಸುವವರೂ ಯಾರೋ ಪಾಪ ?

ಗಿಡಮರ ಕಡಿದವರು ಯಾರೋ ?
ಕಾಡು ಮೇಡು ಸುಳಿದವರಾರೋ ?
ಪೆಟ್ಟು ತಿನ್ನುವವರು ಇನ್ನಾರೋ ?

ದೂರದೃಷ್ಟಿ ಇಲ್ಲದ ಅಭಿವೃದ್ಧಿ ಸೃಷ್ಟಿ….
ಸಂಬಂಧ ಪಡದವರ ಮೇಲೆ ಬಲಿ ದೃಷ್ಟಿ…

ಕಾಡು ಅಲೆದಾಟ….ಬದುಕು ಪರದಾಟ….
ಹೃದಯ ಮುಟ್ಟದ ಪ್ರಕೃತಿಯ ನೋಟ !
ಪುಟಗಟ್ಟಲೆ ಬರೆದಿಡುವ ದುರಂತ ಸಂಪುಟ….
ನೋಡಿ ! ನಮ್ಮದು ಕೇವಲ ತೋರ್ಪಡಿಸುವ ಸಂಕಟ….! 🙂