ಹಸಿರೇ ಉಸಿರು
ಶೀರ್ಷಿಕೆ: ಪ್ರಕೃತಿಯ ರಕ್ಷಣೆ ನಮ್ಮ ಹೊಣೆ
ಒಂದು ದಿನದ ಆಚರಣೆಯಲ್ಲ
ಪರಿಸರ ರಕ್ಷಣೆ
ಪ್ಲಾಸ್ಟಿಕ್ ಬಳಸದಂತೆ ಬಂಧನ
ಹಾಕುವುದು ಹೊಣೆ
ಪ್ರಾಣಿ ಪಶು ಪಕ್ಷಿಗಳಿಗೆ ನೀರಿನ
ವ್ಯವಸ್ಥೆ ಮಾಡೋಣ
ಎಲ್ಲೆಡೆ ಏರುತಲಿದೆ ಜಾಗತಿಕ
ಸೂರ್ಯನ ತಾಪಮಾನ
ಗಿಡ ಮರಗಳನ್ನು ಹೆಚ್ಚು ಬೆಳೆಸಿ
ಮಾಡುವಾ ನಂದನವನ
ಉಸಿರಿನ ಹಸಿರು ತಂಪಿನಲಿ
ಹೆಚ್ಚಾಗಲಿ ಓಝೋನ್
ಒಂದಕ್ಕೊಂದು ಆಹಾರ ಆಶ್ರಯ
ಜೀವಿಗಳ ನಿರೀಕ್ಷಣೆ
ಗಾಳಿ ನೆಲ ನೀರು ಬಿಸಿಲು ಅವಕಾಶ
ಪ್ರಕೃತಿಯಲ್ಲಿ ಬದಲಾವಣೆ
ನಿಸರ್ಗ ಸಂಪನ್ಮೂಲಗಳೆಲ್ಲದರ
ಮಾಡೋಣ ಸಂರಕ್ಷಣೆ
ಸೃಷ್ಟಿ ಸೃಷ್ಟಿಕರ್ತನು ಪುಕ್ಕಟೆ ನೀಡುವ
ಕಾರ್ಯಕೆ ಕೃತಜ್ಞರಾಗಿರೋಣ
ಕ್ಷಮಯಾ ಧರಿತ್ರಿ ನೀನಮ್ಮ ತಾಯೆ
ಕೃತಘ್ನರು ನಮ್ಮ ಕ್ಷಮಿಸಮ್ಮ
ಪ್ರಕೃತಿಯ ರಕ್ಷಣೆ ನಮ್ಮ ನಿಮ್ಮೆಲ್ಲರ
ಕರ್ತವ್ಯ ಹಾಗೂ ಹೊಣೆ
ಕಾಡು ಸುಟ್ಟುಹೋಗದಂತೆ ಬೆಳೆಸೋಣ
ನಾಡು ಉಳಿಸೋಣ
ನುಡಿದಂತೆ ನಡೆದು ತೋರಿಸೋಣ
ಪರಿಸರ ಸ್ವಚ್ಛವಾಗಿಡೋಣ
ಬಂಧು ಬಾಂಧವರೆ ಪರಿಸರ ಪ್ರೇಮಿ
ಬನ್ನಿ ಸಸಿಗಳ ನೋಡೋಣ
ಅನ್ನಪೂರ್ಣ ಸು ಸಕ್ರೋಜಿ. ಪುಣೆ