ಯುಗಾದಿ
ಚಿಗುರು ಚಿಗಿತು ಬಣ್ಣವಾಯ್ತು ಪ್ರಕೃತಿ ಒಡಲು ಚಿನ್ನವಾಯ್ತು
ಯುಗಾದಿ ಶುಭವು ನಾಡನೆಲ್ಲ ತುಂಬಿಯಾಯ್ತು
ವಸಂತ ಚೈತ್ರೆ ಹೂವಬಿರಿದು ಸ್ವಾಗತವ ಹೇಳಿಯಾಯ್ತು
ಹೂ ರಾಶಿ ದುಂಬಿ ಕೇಳಿ ಬೆಳಗಿನಲ್ಲಿ ಕಂಡಾಯ್ತು
ಬೇವು ಬೆಲ್ಲದಲ್ಲಿ ಹೊಸವರ್ಷ
ಬೆಳಕು ಚೆಲ್ಲಿ
ಸೂರ್ಯ ರಶ್ಮಿ ಪ್ರಖರವಾಗಿ ಬಿಸಿಯ ಹವೆಯು ಪಸರಿಸಿಲ್ಲಿ
ಯುಗಾದಿ ತಳಿರು ತಂಬೆಲರಿಲ್ಲಿ
ತಂಪನೆರೆದುರಾಚಿತಿಲ್ಲಿ
ಸುವಾಸನೆಯ ಕುಸುಮ ಹರಡಿ
ಸುಮಧುರವು ಬೀರಿತಿಲ್ಲಿ
ಪರಿ ಪರಿ ಹೂಗಿಡ ಬಳ್ಳಿಯಲ್ಲಿ
ಸಂಭ್ರಮ
ಮಡಿಲು ತುಂಬಿ ಪ್ರಕೃತಿಯಲ್ಲಿ
ಚಿತ್ತಾರವಿಹಂಗಮ
ಕಷ್ಟ ಸುಖದ ಸಾರದಲ್ಲಿ ಯುಗಾದಿ
ಸಂಗಮ
ಮತ್ತೆ ಬಂತು ಯುಗಾದಿ ನವಪರ್ವ
ಸಮಾಗಮ
– ಕಲ್ಪನಾಅರುಣ