ಕರ್ಮಯೋಗಿ ಸಿದ್ಧಗಂಗಾ ಶ್ರೀಗಳು
”””””””””””””””'”‘”””””””
ಅಕ್ಷರಜ್ಞಾನ ಅನ್ನದಾಸೋಹ ತ್ರಿವಿಧ ಆಶ್ರಯದಾತ
ಪರಹಿತದಲ್ಲಿ ಆತ್ಮಾನಂದ ಕಂಡ ತ್ಯಾಗಿ
ಸೇವಾತತ್ಪರತೆಯ ಕಲ್ಯಾಣಕಾರಿ ಅನುಭಾವಿತ್ವ ಮಾರ್ಗಿ
ಕ್ರಿಯಾಶೀಲತೆ ನೇಮ ನಿಷ್ಠೆಯ ಪೂಜ್ಯರು
ಮಠವಿವುದು ಸರಸ್ವತಿಯ ಆಲಯವಾಗಿ
ಧಾರ್ಮಿಕ ಸಂಸ್ಕೃತಿಯ ನಿಲಯವಾಗಿ
ಗ್ರಂಥ ಗುಡಿಯಲ್ಲಿಲ್ಲ ಧರ್ಮವೆಂದ ಸತ್ಪುಪುರುಷ ಯೋಗಿ
ಅಂಗೈಯಲ್ಲಿ ಲಿಂಗವಿರಿಸಿ ಮೌನಧ್ಯಾನ ಸ್ಥಿತಿ
ಮಕ್ಕಳ ಅರಿವಿನ ಕರುಣೆಯ ಜ್ಯೋತಿ
ಧರ್ಮ ಜಾತಿ ವರ್ಗಗಳ ಮೀರಿದ ಶರಣ ದೀಪ್ತಿ
ಸಮತೆ ಸಜ್ಜನತ್ವದ ಆಧ್ಯಾತ್ಮ ತಪಸ್ವಿ
ಅಂತರಂಗ ಬೆಳಕಿನಲಿ ಬಹಿರಂಗ ಕತ್ತಲೆಕಳೆದ
ಸತ್ಕರ್ಮ ಕಲ್ಪತರು ಪಾರಮಾರ್ಥಿಕ ಆತ್ಮಜ್ಞಾನಿ
ಬಾಗಿದ ಬೆನ್ನಲ್ಲೂ ನಿಶ್ಚಲ ಕಾಯಕಯೋಗಿ
ಪರಮ ಪದವಿಗೇರಿದ ಅಕ್ಷಯದ ಭಂಡಾರ
ಸದ್ವಿನಯ ವಿರಕ್ತಿ ತನುಮನದಿ ವ್ಯಾಪಿಸಿ
ಕತ್ತಲೆಯಲ್ಲೂ ಕಣ್ಣಾದ ಕಾರುಣಿಕ
ಜೀವನ ಸತ್ಯ ಮಿಥ್ಯದ ಅಂತರಾತ್ಮದರಿವಿನಲಿ
ನಡೆದಾಡುವ ದೇವರೆಂದೇ ಕೀರ್ತಿಶಿಖರವೇರಿದ
ಸಿದ್ದಗಂಗಾ ಮಠದ ಕರ್ತೃ ನೀವೇ ನಿತ್ಯ ಅಮರ
– ಯಶೋದಾ ರಾಮಕೃಷ್ಣ