- ಕನ್ನಡ ನಾಡು
ಕಟ್ಟಿಕೊಂಡಿಹೆ ಜೇಡರ ಬಲೆ
ಕನ್ನಡವ ಹೊರಳಿಸಲಾಗದಂಥ ನೆಲೆ
ಮೂಲೆಯಲಿ ಸೇರಿಕೊಂಡಂತಿದೆ ಕನ್ನಡ ಅಲೆ
ಅನ್ಯ ಭಾಷಿಕರ ನಡುವೆ ಇಕ್ಕಟ್ಟು ಮುಗ್ಗಟ್ಟಿನ ಕೊಲೆ
ಕನ್ನಡನಾಡು ಆಸರೆಯು, ಸರ್ವ
ಜನಾಂಗಗಳ ಕೈಸೆರೆಯು
ಪರಭಾಷಿಕರಿಗೆ ತೋರಿಹುದು ಅಸಂಖ್ಯ ಸಹನಾಭೂತಿಯು
ಕನ್ನಡದ ಹೆಮ್ಮೆಗೆ ಭಂಗ ತರುವಂತಹ ಪರಿಸ್ಥಿತಿಯು
ಕನ್ನಡವನರಿಯದವರೂ ಬಾಳುವಂತಹ ವ್ಯವಸ್ಥೆಯು
ಕನ್ನಡ ನಾಡು ಚೆಲುವ ಭಾಷೆಯ
ಸೌಂದರ್ಯತೆಯ ಬೀಡು
ಮಧುರತೆಯ ಕಂಠದಲಿ ಹೊರಹೊರಟ ಕೋಡು
ಕನ್ನಡವು ಮರೆತು ವ್ಯಾಮೋಹದಲಿ
ಅನ್ಯತೆಯ ಕಲಿತು ಎಸಗಿದೆ ಕೇಡು
ಕನ್ನಡಮ್ಮಗೆ ಕನ್ನಡದ ವರ್ಣಮಾಲೆಯ ಬರೆದು ಉಲಿದು ಹಾಡು
ಅಳಿವಿನಂಚಿನಲಿ ಕನ್ನಡ, ಅನ್ಯರತ್ತ ಕರ್ನಾಟಕ
ಕನ್ನಡಿಗರೇ ಎದ್ದೇಳಿ ಕನ್ನಡವ ಪುನರುಚ್ಚರಿಸಿ ನಿರ್ಮಿಸಿರಿ ನಾಕ
ಕನ್ನಡದ ಅಭಿಮಾನವ ಹೊತ್ತು
ಹಡೆದು ರಚಿಸಿರಿ ಪಾಕ
ಕನ್ನಡದ ವೈಭವವು ಮೆರೆಯುತ್ತ
ಕನ್ನಡದ ಗೆಲ್ಗೆ ಹೊಮ್ಮಲಿ ಬೆಳಕ
ಕನ್ನಡ ಸಾಹಿತ್ಯವರಳಲಿ ಕೆಚ್ಚಿನಲಿ
ಕನ್ನಡದ ನಾಡುನುಡಿ ಇಚ್ಚೆಯಲಿ
ಕನ್ನಡವ ಬಳಸಲಿ ಸ್ವೇಚ್ಚೆಯಲಿ
ಕನ್ನಡನಾಡು ಸಂಪದ್ಭರಿತ ಸಾಕ್ಷಾತ್ಕಾರದಲಿ
ಕವಯಿತ್ರಿ: ಕಲ್ಪನಾಅರುಣ