ಜಿಲ್ಲೆಯಲ್ಲಿ ಹೆಣ್ಣುಮಕ್ಕಳ ಅನುಪಾತ ಕುಸಿತ- ಎಚ್.ಆರ್. ಅರವಿಂದ್ ಕಳವಳ
ಮಂಡ್ಯ: ಜಿಲ್ಲೆಯಲ್ಲಿ ಹೆಣ್ಣು ಭ್ರೂಣಹತ್ಯೆಯಿಂದ ಹೆಣ್ಣು ಮಕ್ಕಳ ಅನುಪಾತ ಕುಸಿದಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್ ಹೇಳಿದರು. ನಗರದಲ್ಲಿರುವ ಸೇವಾಕಿರಣ ವೃದ್ದಾಶ್ರಮದ ಸಭಾಂಗಣದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಮತ್ತು ಚುಟುಕು ಸಾಹಿತ್ಯ ಪರಿಷತ್ತು ತಾಲೂಕು ಘಟಕ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಯೋವೃದ್ದಿಗೆ ಸಿಹಿ-ಹಣ್ಣು ವಿತರಣೆ ಮತ್ತು ಸಾಧಕರಿಗೆ ಅಭಿನಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣುಭ್ರೂಣ ಹತ್ಯೆ ಪ್ರಕರಣದಲ್ಲಿ ರಾಜ್ಯಕ್ಕೆ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನ ಪಡೆದೆ ಹೆಣ್ಣು ಸಂತಾನೋತ್ಪತ್ತಿಯ ತಡೆಯುವ ದುರಂತದಲ್ಲಿದೆ, ಇತ್ತೀಚಗೆ ಮದುವೆಯಾಗುವ ಗಂಡು ಮಕ್ಕಳಿಗೆ ವಧುಗಳು ಲಭ್ಯವಾಗುತ್ತಿಲ್ಲ. ಸಮಾನವಾಗಿರಬೇಕಿದ್ದ ಹೆಣ್ಣು-ಗಂಡುಗಳ ಅನುಪಾತದಲ್ಲಿ ಹೆಣ್ಣು ಮಕ್ಕಳ ಅನುಪಾತ ಶೇ. ೭೦ರಷ್ಟಿದೆ ಶೇ. ೩೦ರಷ್ಟು ಹೆಣ್ಣು ಮಕ್ಕಳ ಕೊರತೆ ಎದುರಾಗಿದೆ ಎಂದು ನುಡಿದರು.
ಇಂದು ನಾಗರೀಕ ಸಮಾಜ ವಿಶ್ವ ಮಹಿಳಾ ದಿನಾಚರಣೆ ಆಚರಿಸು ಮೂಲಕ ಸಾಕಷ್ಟು ಪ್ರಗತಿ ಬಗ್ಗೆ ಚರ್ಚೆನಡೆಸುತ್ತಿರುವುದು ಶ್ಲಾಘನೀಯ. ಒಂದೆಡೆ ಇದೇ ಹೆಣ್ಣು ಹೆಣ್ಣುಭ್ರೂಣ ಹತ್ಯೆಗೆ ನೂಕುವುದು, ಒಳಗಾಗುವುದು ಎಷ್ಟು ಸರಿ, ಸಾಮಾಜಿಕ ವ್ಯವಸ್ಥೆಯಲ್ಲಿನ ಅಸಮತೋಲನಕ್ಕೆ ಕಾರಣವಾಗುತ್ತಿರುವುದು ದುರಂತ ಎಂದು ಎಚ್ಚರಿಸಿದರು.
ಬಳಿಕ ಮಾತನಾಡಿದ ಪರಿಸರಪ್ರೇಮಿ ಸಾಹಿತಿ ಆರ್.ಎಸ್. ಚಂದ್ರಶೇಖರ್, ಮುಂದಿನ ಪೀಳಿಗೆಯ ಸಂರಕ್ಷಣೆಗಾಗಿ ಹೆಣ್ಣು ಮತ್ತು ಪರಿಸರ ಸಮತೋಲವಾಗಿರಬೇಕು ಎಂದು ಹೇಳಿದರು.
ದಿನೇ ದಿನೇ ಹೆಣ್ಣು ಮಕ್ಕಳ ಸಂತತಿ ಕ್ಷೀಣಿಸುತ್ತಿದೆ, ಅನುಪಾತ ಏರುಪೇರಾಗುತ್ತಿದೆ ಇದು ನಿಲ್ಲಬೇಕಿದೆ. ಮನುಷ್ಯನಿಗೆ ಹುಟ್ಟಿನಿಂದ ಸಾಯುವವರೆಗೂ ಮರಗಳು ಅತ್ಯವಶ್ಯಕ, ಹುಟ್ಟಿದಾಗ ತೊಟ್ಟಿಲಿಗೆ ಹಾಕುತ್ತಾರೆ, ಬೆಳೆಯುತ್ತ ಮರದಿಂದಲೇ ಬದುಕುತ್ತಾನೆ, ಸತ್ತಾಗ ಮರದಿಂದಲೇ ಸುಟ್ಟಾಕ್ಕುತ್ತಾರೆ. ಹೀಗೆ ಮನುಷ್ಯನಿಗೆ ಮರದ ನಂಟು ಅವಿಭಾಜ್ಯವಾಗಿದೆ ಎಂದು ನುಡಿದರು. ಪ್ರಪಂಚದ ಯಾವುದೇ ದೇಶದಲ್ಲಿ ಶ್ರೀಗಂಧ ಮರಕ್ಕೆ ಸಾಕಷ್ಟು ಬೇಡಿಕೆ ಇದೆ. ದೊಡ್ಡ ಮೊತ್ತದ ಹಣ ನೀಡುವ ಮರ ಶ್ರೀಗಂಧವಾಗಿದ್ದು, ೨ನೇ ಸ್ಥಾನ ಪಡೆದುಕೊಂಡಿದೆ. ಕರ್ನಾಟಕ ರಾಜ್ಯದಲ್ಲ ನೆಲದಲ್ಲಿ ಮಾತ್ರ ಅತಿ ಹೆಚ್ಚು ಬೆಳೆಯಲು ಸಾಧ್ಯ. ಇನ್ನಾವ ದೇಶಗಳಿಂದಲೂ ಸಾಧ್ಯವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಸಾಹಿತಿ ಆರ್.ಎಸ್. ಚಂದ್ರಶೇಖರ್ ಬರೆದಿರುವ “ಕನ್ನಡ ನಾಡು ಶ್ರೀಗಂಧದ ಬೀಡು” ಪುಸ್ತಕವನ್ನು ಪರಸ್ಪರ ಗ್ರಾಮ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ದೇವರಾಜ್ ಕೊಪ್ಪ ಬಿಡುಗಡೆಗೊಳಿಸಿದರು. ವಯೋವೃದ್ಧರಿಗೆ ಸಿಹಿ ಹಣ್ಣು ವಿತರಿಸಿ ಸಾಧಕರಿಗೆ ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ವಿ ನಾಗರಾಜು, ಕ.ಸಿ.ವೇ. ರಾಜ್ಯಾಧ್ಯಕ್ಷ ಪೋತೇರ ಮಹಾದೇವ, ಪರಸ್ಪರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿಲ್ಲಾಧ್ಯಕ್ಷೆ ಮಂಜುಳಾರಮೇಶ್, ಮಧುರಚಂದ್ರಶೇಕರ್, ಜಯಲಕ್ಷ್ಮಮ್ಮ, ಮಂಜಪ್ಪ, ಸರಸ್ವತಮ್ಮ ಹಾಜರಿದ್ದರು.
ಮಂಡ್ಯ ನಗರದಲ್ಲಿರುವ ಸೇವಾಕಿರಣ ವೃದ್ದಾಶ್ರಮದ ಸಭಾಂಗಣದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಮತ್ತು ಚುಟುಕು ಸಾಹಿತ್ಯ ಪರಿಷತ್ತು ತಾಲೂಕು ಘಟಕ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಯೋವೃದ್ದಿಗೆ ಸಿಹಿ-ಹಣ್ಣು ವಿತರಣೆ ಮತ್ತು ಸಾಧಕರಿಗೆ ಅಭಿನಂದನೆ ಕಾರ್ಯಕ್ರಮವನ್ನು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್ ಉದ್ಘಾಟಿಸಿದರು.