ಮಕ್ಕಳಿಗೆ ಮಾನಸಿಕ ಖಿನ್ನತೆ ಕೊಟ್ಟ ಶಿಕ್ಷಣ ಇಲಾಖೆ ಮತ್ತು ಹೈಕೋರ್ಟ್
ಈಗಾಗಲೇ ಸೋಮವಾರದಿಂದ ಆರಂಭವಾಗಿದ್ದ ಪರೀಕ್ಷೆಗಳು ಮುನ್ನುಡಿಕೆಯಾಗಿದ್ದು ಪೋಷಕರ ಮತ್ತು ಮಕ್ಕಳಿಗೆ ಇಕ್ಕಟ್ಟಿನ ಪರಿಸ್ಥಿತಿಗೆ ದೂಡಿದೆ. ಈಗಾಗಲೇ ಖುಷಿಯಲ್ಲಿದ್ದ ಮಕ್ಕಳಿಗೆ ಈ ಸುದ್ದಿ ಖಿನ್ನತೆಗೆ ದೂಡಲು ಕಾರಣವಾಗಿದೆ. ಹೋದ ವರ್ಷ ಕೂಡ ಇದೇ ರೀತಿಯಾಗಿತ್ತು. ಮಕ್ಕಳು ಎರಡು ಬಾರಿ ಪರೀಕ್ಷೆ ಬರೆದಿದ್ದರು. ಪ್ರತಿ ವರ್ಷ ಸರ್ಕಾರದ ಶಿಕ್ಷಣ ಇಲಾಖೆ ಮತ್ತು ಖಾಸಗಿ ಸಂಸ್ಥೆಗಳ ಒಕ್ಕೂಟಗಳು ಮಕ್ಕಳ ಮೇಲೆ ದುಷ್ಪರಿಣಾಮ ಬಿರುತ್ತಿವೆ. ಆತಂಕಕಾರಿ ಘಟನೆ ಏನೆಂದರೆ ಮಕ್ಕಳು ಮತ್ತು ಶಿಕ್ಷಕರು ತೊಂದರೆಗೆ ಒಳಗಾಗಿದ್ದಾರೆ. ಆದಷ್ಟು ಬೇಗ ಸರ್ಕಾರ ಈ ಒಂದು ಸಮಸ್ಯೆಯನ್ನು ಬಗೆಹರಿಸಬೇಕು. ಜೊತೆಗೆ ಮಕ್ಕಳ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು.
ವರದಿ: ಚಂದ್ರಶೇಖರಚಾರಿ, ಚಿತ್ರದುರ್ಗ