ಪತಿಯ ಜಾಣ ಮೌನ
ಮನೆಯೊಳಗೆ ಮನೆಯೊಡೆಯ ಹೆಸರಿಗೆ ಮಾತ್ರ
ಮನೆಯೊಳಗೆ ನಡೆಯುವುದೆಲ್ಲಾ
ಮಡದಿಯ ಮಾತು.
ಆದರೂ ಮಡದಿ ಕೇಳುವಳು ಒಮ್ಮೊಮ್ಮೆ
ರೀ ನಾನು ಹೋಗಿಬರಲೇ ತವರು ಮನೆಗೆ ಅಂತ.
ಮನೆಯೊಡೆಯ
ಕೂಡಲೇ ಶರಣಾಗುವನು
ಜಾಣ ಮೌನಕ್ಕೆ
ಅವನಿಗೂ ಗೊತ್ತು ಹೋಗು ಅಂದರು ಕಷ್ಟ
ತವರಿಗೆ ಹೋಗಬೇಡ ಅಂದರು ಕಷ್ಟ ಅಂತ.
ಕೂಡಲೇ ಹೇಳುವಳು ಮಡದಿ
ತವರಿಗೆ ಹೋಗಿ ಬರುವೆನು
ಬೇಗ ಅಂತ.
ಗಂಡನು ಖುಷಿಪಡುವನು ಮನಸ್ಸಿನೊಳಗೆ
ಆದರೂ ತನ್ನ ಖುಷಿಯನ್ನು ತೋರಿಸಿ ಕೊಳ್ಳದೆ
ಮನಸ್ಸಿನ ಹೊರಗೆ.
ಹೇಳುವನು ಮಡದಿಗೆ ನಿನ್ನನ್ನು.
ಬಿಟ್ಟಿರಲಾರೆ ಚಿನ್ನ ಬೇಗ ಬಾ ನನ್ನ ರನ್ನ ಎಂದು.
ಮನಸಲ್ಲೇ ಅಂದುಕೊಳ್ಳುವನು
ಮನೆಯಲ್ಲಿ ನೀನಿಲ್ಲದಿದ್ರೆ
ಆ ಸ್ವರ್ಗವೇ, ತನ್ನ ಕೈಯಲ್ಲಿ ಎಂದು.
ಆ ಸ್ವರ್ಗವೇ ತನ್ನ ಕೈಯಲ್ಲಿ ಎಂದು ಮನದಲ್ಲೇ
ಮಡದಿ ಇಲ್ಲದ ಸ್ವರ್ಗದ ಮನೆಯ ಚಿತ್ರಣವನ್ನು
ನೆನೆ ನೆನೆದು.
ಒಳಒಳಗೆ ಖುಷಿಯನ್ನು.
ಪಡುತ್ತಾನೆ ಅಂದು .😄😄😄…
– ರಾಘವೇಂದ್ರ ಸಿಂತ್ರೆ
ರಾಜಕಮಲ್, ಸಿರ್ಸಿ