ನಿವೃತ್ತಿಯ ಬದುಕು ಹೀಗೆಯೇ ….🖋️
ಒಮ್ಮೆ ಕೆಲಸದಿಂದ ನಿವೃತ್ತಿಯಾಗಿ ಹೋದ ಮೇಲೆ ಮತ್ತೆ ಕಾರ್ಯಾಲಯಕ್ಕೆ ಕೆಲಸ ನಿಮಿತ್ತ ಹೋದರೆ ಸೇವೆ ನೀಡುವಾಗ ತಮ್ಮ ನಿವೃತ್ತರನ್ನು ನಿರೀಕ್ಷಿಸಲಾಗುತ್ತದೆ. ಇದ್ಯಾವ ಪೀಡೆ ಬಂದು ಕಾಟ ಕೊಡುತಾ ಇದೆ ಎಂದು ಗೊಣಗುತ್ತಾರೆ. ಹೊಸಬರಾದರೆ ಏನೋ ಒಂದು ಸುಳ್ಳು ಹೇಳಿ ಕಳುಹಿಸುತ್ತಾರೆ, ಆದರೆ ನಿವೃತ್ತ ರಿಗೆ ಹಾಗೆ ಮಾಡಲು ಅವರಿಗೆ ಆಗುವುದಿಲ್ಲ. ಸೌಜನ್ಯದಿಂದ ಮಾತನಾಡಿಸುವುದಿಲ್ಲ, ಗೌರವವನ್ನು ನೀಡುವುದಿಲ್ಲ ಸಂಪೂರ್ಣ ನಿರ್ಲಕ್ಷ ಮಾಡುತ್ತಾರೆ. ಕೆಲವೊಮ್ಮೆ ತುಂಬಾ ನೋವಾಗುತ್ತದೆ, ಸಿಟ್ಟು ಬರುತ್ತದೆ. ಆಗ ಅತ್ತೆಗೆ ಬಂದ ಕಾಲ ಈಗ ಸೊಸೆಗೂ ಬಂದಂತಾಗಿದೆ.
ಅದಕ್ಕೆ ನಮ್ಮ ಹಿರಿಯ ನಿವೃತ್ತರು ಹೇಳುತ್ತಾರೆ ರಿಟೈರ್ ಆದಮೇಲೆ ನಿಮ್ಮ ಕಾರ್ಯ ಲಯಕ್ಕೆ ಹೋಗಬ್ಯಾಡ್ರಪ್ಪ… ಅಲ್ಲಿ ಅವಮಾನ ಪಡಬ್ಯಾಡ್ರಪ್ಪಾ.. ಪಿಂಚಣಿ ವಿಷಯಕ್ಕೆ ಮಾತ್ರ ಹೋಗಿ ಬನ್ನಿ ಎನ್ನುತ್ತಾರೆ. ಅವರ ಸಲಹೆ ಸರಿ ಇದೆ ನೆಟ್ ಬ್ಯಾಂಕಿಂಗ್ ಪಡೆಯಿರಿ, ಎಟಿಎಂ ಬಳಸಿ, ಯುಪಿಐ ಪೇಮೆಂಟ್ ಬ್ಯಾಂಕ್ ಉಪಯೋಗಿಸಿ, ಎಸಬಿಐ ಯುನೋ ಬಳಸಿ, ಆನ್ಲೈನನಲ್ಲಿ ಜೀವಂತ ಪ್ರಮಾಣ ಪತ್ರ ಕಳುಹಿಸಿ. ಇಮೇಲ್ ಕಳುಹಿಸಿ ,ಫೋನ್ ಮಾಡಿ .ಇತ್ತೀಚಿಗೆ ನೌಕರರು, ಅಧಿಕಾರಿಗಳು ಆಗಾಗ ಬದಲಾಗುತ್ತಿರುತ್ತಾರೆ, ಹೊಸಬರು ಬರುತ್ತಾರೆ.
ನೀವು ಹಿಂದೆ ದೊಡ್ಡ ಆಫೀಸರ್ ಅಥವಾ ಬಾಸ್ ಆಗಿದ್ದರು ಅಷ್ಟೇ, ಅದು ಈಗ ನಿಮ್ಮ ಆಫೀಸ್ ಅಲ್ಲ. ನಿಮ್ಮ ಕಾಲ ಮುಗಿಯಿತು, ಹತಾಶೆಯಿಂದ ಕೋಪಗೊಳ್ಳಬೇಡಿ. ಇನ್ನು ಮನೆಯಲ್ಲಿ … ಅಲ್ಲೂ ಹಾಗೇ… ನಿವೃತ್ತಿಯಾದ ಮೇಲೆ, ದುಡಿಮೆ ನಿಂತ ಮೇಲೆ… ಹೆಂಡತಿ ನಿರ್ಲಕ್ಷಿಸುತ್ತಾಳೆ, ಮಗ ನಿರ್ಲಕ್ಷಿಸುತ್ತಾನೆ, ಸೊಸೆ ನಿರ್ಲಕ್ಷಿಸುತ್ತಾಳೆ, ಅಳಿಯ ನಿರ್ಲಕ್ಷಿಸುತ್ತಾನೆ, ಹಳೆಯ ಫ್ರೆಂಡ್ಸೇ ಗತಿ.
ಗಮನಿಸಿ: ನಿಮ್ಮಲ್ಲಿರುವ ಊರಿನ ಒಂದು ಸಣ್ಣ ಕ್ಯಾಂಟೀನನಲ್ಲಿ ಕಾಫೀ ಚೆನ್ನಾಗಿರುತ್ತೆ, ಆದರೆ ಬೆಳಗ್ಗೆ 7:30 ಸಮಯದಲ್ಲಿ ನಿವೃತ್ತರೇ ತುಂಬಿರುತ್ತಾರೆ. ಯಾಕೆ ಹೀಗೆ ..? ಕ್ಯಾಂಟೀನ್ ಮಾಲೀಕ ಗೌರವದಿಂದ ಮಾತನಾಡಿಸುತ್ತಾನೆ ಮುಂಜಾನೆ ಕೇರ್ ತೆಗೆದುಕೊಳ್ಳುವವನು ಅವನೇ… ಸಿಂಗಲ್ ಇಡ್ಲಿ, ಸಿಂಗಲ್ ವಡೆ, ಸಿಂಗಲ್ ಪೂರಿ ಅರ್ಧ ಕಾಫಿ ಸೇವಿಸಿದರೆ ಏನೋ ಸಮಾಧಾನ, ಅಲ್ಲಿರುವ ಹಳೆಯ ಸ್ನೇಹಿತರೊಡನೆ ಹಳೆಯ ನೆನಪು ಮಾತನಾಡಿದರೆ ಏನೋ ಖುಷಿ, ಅವರಲ್ಲಿ ಬಹುತೇಕರು ಸಕ್ಕರೆ ಕಾಯಿಲೆ ಇರುವವರು, ಮನೆಯಲ್ಲಿ ಬೇಗ ಮಾಡಿ ಕೊಡುವವರಿಲ್ಲ, ಹೆಂಡತಿ ತನ್ನಂತೆ ವಯಸ್ಸಾಗಿರುತ್ತಾಳೆ.. ಸೊಸೆ ಇದ್ದರೆ ಹೇಳುವಂತಿಲ್ಲ, ಕೇಳುವಂತಿಲ್ಲ ಮೆತ್ತಗೆ ಕೇಳಬೇಕು. ಮಗಳ ಮನೆಯಲ್ಲಿ ಮುಜುಗರ, ಹಿಂದೆ ಹೆಂಡತಿಗೆ ದಬಾಯಿಸುವಂತೆ ಈಗ ಯಾರನ್ನು ದಬಾಯಿಸುವಂತಿಲ್ಲ. ಮಗನಿಂದ /ಮಗಳಿಂದ ಆದೇಶ ಬರುತ್ತದೆ.
ವಯಸ್ಸು ಆಗುತ್ತಾ ಆಗುತ್ತಾ ಇದ್ದಂತೆ ನಮ್ಮ ಕೈಯಲ್ಲಿ ಏನು ಆಗುವುದಿಲ್ಲ, ಏನು ಮಾಡಲಾಗುವುದಿಲ್ಲ, ಕೋಪ, ಸಿಟ್ಟು ಮಾಡಿಕೊಂಡರೆ ನಮಗೆ ಕಷ್ಟ, ನಮ್ಮ ಆರೋಗ್ಯವೇ ಹಾಳಾಗುತ್ತದೆ. ವಯಸ್ಸು ಜಾರುತಿದೆ ಆರೆಳು ದಶಕಗಳ ಹಿಂದೆ ಎಳೆಯದಾಗಿದ್ದ ದೇಹ ಮುಪ್ಪಾಗಿದೆ. ಹೆಚ್ಚು ಊಟ ಮಾಡಲಾಗುವುದಿಲ್ಲ ದೇಹಕೃಶವಾಗುತ್ತಿದೆ, ಮರೆವು ಜಾಸ್ತಿಯಾಗಿದೆ, ದನಿ ನಡುಗುತಿದೆ, ಕಣ್ಣು ಮಂಜಾಗುತ್ತಿವೆ, ಕಿವಿ ಕೆಪ್ಪಾಗುತ್ತಿದೆ, ಹಲ್ಲು ಉದುರುತ್ತಿವೆ ಚರ್ಮ ಸುಕ್ಕಾಗುತ್ತಿದೆ, ಕಾಯಿಲೆಗಳು ಆವರಿಸಿವೆ. ಕೈಕಾಲುಗಳು ಅದರುತ್ತಿದೆ, ಮೊದಲಿನ ಶಕ್ತಿ ಇಲ್ಲ, ಚೈತನ್ಯವಿಲ್ಲ.
“ಬಡವನ ಕೋಪ ದವಡೆಗೆ ಮೂಲ.” ವಯಸ್ಸಾದ ನಿಮ್ಮ ಸಂಗಾತಿಗೆ ಸಣ್ಣ ಪುಟ್ಟ ಕೆಲಸದಲ್ಲಿ ನೆರವಾಗಿ ನಿಮಗಾಗಿ ದುಡಿದೂ ದುಡಿದೂ ಆಯಾಸಗೊಂಡಿರುವ ಆಕೆ ಯೊಡನೆ ಎಂದೂ ಈ ವಯಸ್ಸಿನಲ್ಲಿ ಜಗಳ ಆಡಬೇಡಿ. ತಾಳ್ಮೆಯಿಂದ ಬದುಕಬೇಕು. ಏನೇ ಬರಲಿ ಎಲ್ಲವನ್ನು ಮರೆತು ಆನಂದದಿಂದ ಬಾಳಬೇಕು.
- ವಿಶ್ವಾಸ ಡಿ. ಗೌಡ
ಸಕಲೇಶಪುರ
9743636831