ಹಿತ್ತಾಳೆ ಕಿವಿ
ಮಾತನಾಡುವಾಗ ಸ್ವಲ್ಪ ಹುಷಾರಪ್ಪ ಇಲ್ಲಿ ಎಲ್ಲರೂ ಹಿತ್ತಾಳೆ ಕಿವಿಯವರೇ ಇರುವುದು ಇಂತಹ ಮಾತು ಸರ್ವೇಸಾಮಾನ್ಯವಾಗಿ ಕೇಳಿಬರುವಂತಹ ಮಾತು. ಹಿತ್ತಾಳೆ ಕಿವಿಯವರು ಅಂದರೆ ಯಾರ ಮಾತನ್ನಾದರೂ ಅದರ ಸತ್ಯ ಸತ್ಯತೆಯನ್ನು ತಿಳಿಯದೆ ನಂಬುವಂತಹ ಮೂರ್ಖರು ಎಂಬುದು ಅರ್ಥ. ಇಂತಹ ಮನುಷ್ಯರುಗಳ ಬಗ್ಗೆ ಯಾವಾಗಲೂ ಎಚ್ಚರದಿಂದಿರಬೇಕು. ಇಂತಹ ಮನುಷ್ಯರಿಂದಲೇ ಒಳ್ಳೆಯ ಸಂಬಂಧಗಳು ನಾಶವಾಗುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಯಾರದೋ ಮಾತನ್ನ ಕೇಳಿ ಅದಕ್ಕೆ ಸ್ವಲ್ಪ ಹುಳಿ ಉಪ್ಪು ಖಾರ ಸೇರಿಸಿ ಇನ್ನೊಬ್ಬರಿಗೆ ಹೇಳುವಂತಹ ದುರ್ಗುಣದವರಿಗೆ ಇದನ್ನ ಹೋಲಿಸುತ್ತಾರೆ. ಜೀವನದಲ್ಲಿರುವಂತಹ ಒಳ್ಳೆಯ ಸಂಬಂಧಗಳು ಒಳ್ಳೆ ಸ್ನೇಹ ಬಾಂಧವ್ಯಗಳು ಅವರ ಕಣ್ಣಿಗೆ ಕುಕ್ಕುವಂತಾಗುತ್ತದೆ ಅಂತಹ ಸಂದರ್ಭದಲ್ಲಿ ಇನ್ನೊಬ್ಬರ ಮಾತಿಗೆ ಕಿವಿಗೊಟ್ಟು ಅದರ ಸತ್ಯಾಸತತೆಯನ್ನು ಅರಿಯದೆ ಸತ್ಯವೋ ಮೀತ್ಯವೋ ಅಂತ ತಿಳಿಯದೆ ಅದನ್ನ ಇನ್ನೊಬ್ಬರ ಕಿವಿಗೆ ಮನ ಬಂದಂತೆ ಹೇಳಿಬಿಡುತ್ತಾರೆ. ಆದಷ್ಟು ಇಂತಹ ದುರ್ಗುಣ ಇರುವ ಮನುಷ್ಯರಿಂದ ದೂರ ಇರುವುದೇ ನಮಗೆ ಲೇಸು.. ಇಂಥವರಿಂದ ಅನೇಕ ಸಾರಿ ನಾವು ನಮಗೆ ಗೊತ್ತಿಲ್ಲದೆ ಬೇಕಾದಷ್ಟು ಪಾಠಗಳನ್ನು ಕಲಿತಿರುತ್ತೇವೆ ಅದರಿಂದ ಆದರೂ ಮುಂದೆ ಎಚ್ಚೆತ್ತು ಕೊಂಡು ಅವರಿಂದ ದೂರ ಇರುವುದು ನಮ್ಮ ಸುಖೀ ಜೀವನಕ್ಕೆ ಒಳ್ಳೆಯದು.
🌸🌸🌸🌸🌸🌸🌸🌸
– ರವೀಂದ್ರ ಸಿ.ವಿ., ಮೈಸೂರು
🌸🌸🌸🌸🌸🌸🌸🌸🌸