Table of Contents

ಸಂಘ ಜೀವಿಯಾಗಿ

ಸಂಕಷ್ಟದೊಳಗೆ ತಿಳಿಯುವುದು ಸಂಘಟನೆಗಳ ಮಹತ್ವ,
ಸಂಭ್ರಮದಲ್ಲಿ ಮರೆಯದಿರಿ ಪಡೆಯಲು ನೀವು ಸದಸ್ಯತ್ವ;
ಜೀವನದ ಪ್ರತಿ ಹಂತದಲ್ಲೂ ಅರಿವಿಗೆ ಬಾರದಂತೆ ತಿರುವಿದೆ,
ದಿಕ್ಕುಗಳು ಕಾಣದಿರುವಾಗ ತೋರಲು ಸಂಘಟನೆ ನಮಗಿದೆ!
ನಿದ್ದೆಯಲ್ಲೆದ್ದು ನಡೆಯುವವರು ಜಗದೊಳಗಿಹರು ,
ಎಚ್ಚರಗೊಂಡ ಕತೆ ಹೇಳಿ ಮುಗುಳ್ನಗೆಯ ಬೀರುವರು;
ಹದ್ದಿನ ಕಣ್ತೆರೆದು ಬೇಟೆಗೆ ಕುರಿಗಳನ್ನು ಹುಡುಕುವುದು,
ನಗುಮೊಗವ ಹೊತ್ತು ನಂಬಿಕೆಗೆ ದ್ರೋಹವೆಸಗುವರು!
ನಾಳೆ ಬರುವ ಸಾವಿಗೆ
ಇಂದೇಕೆ ಖರೀದಿಸುವೆ ಹೊದಿಕೆ ?
ನೋವಿಗಂಜದೇ ನಡೆದರೆ
ಗುರಿಯ ತುದಿ ನೀನೂ ತಲುಪುವೆ;
ಕಿವಿಗೆ ಬಿದ್ದ ಪದಗಳ ಪ್ರತಿಫಲವನ್ನು ಆಲಿಸುವುದೇತಕೆ ?
ಕಿವುಡರೇ ತುಂಬಿರುವ ಜಗದೊಳು ಮೂಗನಾಗಬಾರದೇ !
ಹೊರಗಿಣುಕಿದ ಉಸಿರು ಒಳಗೆಳೆದುಕೊಳ್ಳಲಾಗದಿರೆ ಅದೇ ಸಾವು;
ಬಳಿ ಬರುವ ಕ್ಷಣಗಳನ್ನು ಅನುಭವಿಸದೇ ಕಳೆದರೆ ನಿಮ್ಮ ಸೋಲು:
ವಾಟ್ಸ್ ಆ್ಯಪ್ ನಿಂದ ಶುರುಮಾಡಿ ಫೇಸ್ಬುಕ್ ತುಂಬಾ ಸುತ್ತಾಡಿ,
ಯೂಟ್ಯೂಬ್ ನಲ್ಲಿ ಹುಡುಕಿದರೂ ನಿಲ್ಲಲಾರದಾ ಹುಡುಕಾಟವು;
ಮೊಬೈಲ್ ಕೈಯೊಳಗೆ ಇದ್ದಾಗ ಸ್ಕ್ರೀನ್ ಮೇಲೆಯೇ ಜೀವನವು,
ಬ್ಯಾಟರಿ ಅಸ್ತಂಗತವಾದರೂ ಮುಗಿಯದಂತಹಾ ಸಂಚಾರವು!
✍️ನಾಗರಾಜ ಗುನಗ
ಕೋಡಕಣಿ/ಕುಮಟಾ ತಾಲ್ಲೂಕು