ಗಜ಼ಲ್

ಬಾನಂಚಿನ ಬಾನಾಡಿಗಳ ಒಡನಾಟದ ಅಂದವ ಸವಿಯಲು ಬಂದೆ
ತುಟಿಯಂಚಿನ ರಸಹನಿಗಳ ಮಿಳಿತದ ಚೆಂದವ ಬಣ್ಣಿಸಲು ಬಂದೆ

ಕಾರ್ಮುಗಿಲು ಕರಗಿ ಮಳೆಯ ತೊಯ್ದಾಟದಲಿ ಮೈಮಾಟ ಮಿನುಗಿತು
ಕಣ್ಣಂಚಿನ ತಳಮಳ ಮಿಡಿತದ ರಾಗವ ಹಾಡಲು ಬಂದೆ

ಬಕಪಕ್ಷಿಯ ತೊಳಲಾಟಕೆ ಮಡಿಲ ತೊಟ್ಟಿಲಲಿ ಆಸರೆ ನೀಡು
ಕೋಲ್ಮಿಂಚಿನ ಕಂಗಳ ಇರಿತದ ಗಾಯವ ಮರೆಸಲು ಬಂದೆ

ಚರಣ ನೂಪುರದ ಗಲುಗಲು ನಾದಕೆ ಪಾಗಲ್ ಪ್ರೇಮಿಯಾದೆ
ಕಂಚಿನ ಕೊರಳ ಸಂಗೀತದ ಆಲಾಪವ ಆಲಿಸಲು ಬಂದೆ

ಪ್ರತಿ ಕಂಬವೂ ಪೇಳುತ್ತಿದೆ ಈರ್ವರ ಸ್ವರ ಮಾಧುರ್ಯವನು
ಸುಮಗಳ ಸಿಂಚನ ಪರಿಮಳದ ಶ್ವಾಸವ ಆಸ್ವಾದಿಸಲು ಬಂದೆ

– 🎸ಸುಕುಮಾರ