ಸುಂದರಿ ಚೆಲುವೆ
************
ಏನಿದು ಮೋಹವು ನಿನ್ನಯ ವದನವು
ವರ್ಣಿಸೆ ಸಾಧ್ಯವೆ ನನಗೀಗ
ಪ್ರೇಮದ ಪಾಶದಿ ಸೆಳೆಯುವ ನೋಟವು
ಬೀಳದೆ ಇರುವೆನೆ ನಾನೀಗ ll

ಆಸೆಯ ಹೊತ್ತಿಹ ಬಯಕೆಯು ಮನಸಲಿ
ತುಂಬಿದ ಸ್ನೇಹವು ಕಡಲಂತೆ
ಭಾವನೆ ತೋರಿಸಿ ಪ್ರೀತಿಯ ನಗುವಲಿ
ಹೂವಿನ ಹಾಗೆಯೆ ಚೆಲುವಂತೆ ll

ಗುಣದಲಿ ದೇವತೆ ಕ್ಷಣದಲಿ ಸೆಳೆಯುವೆ
ರಮಣಿಯೆ ನಿನ್ನನು ಪಡೆದಂತೆ
ರಂಭೆಯೆ ಬಂದಳೆ ಭೂಮಿಗೆ ಎಂಬುದೆ
ನನಗಿದು ಬಂದಿಹ ಬಲುಚಿಂತೆ ll

✍️  ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ