ಶ್ರೀ ಗುರು ನಮನ
************
ಗುರುವಿನ ಚರಣಕೆ ಮಣಿಯುವೆ ದಿನವೂ
ಕರುಣೆಯ ತೋರಿಸು ಗುರುವರ್ಯ
ನಿತ್ಯವೂ ದೀಪವ ಬೆಳಗಿಸಿ ನಿಮ್ಮನು
ನೆನೆಯದೆ ಮಾಡೆನು ಶುಭಕಾರ್ಯ ll

ಗುರುವನು ಭಜಿಸುವೆ ರಾಘವ ರಾಮನೆ
ಪೀಠಕೆ ನಮಿಸುವೆ ದಯತೋರು
ಪಾದಕೆ ಎರಗುತ ಪಾದವ ತೊಳೆಯುವೆ
ಪಾಪವ ಕಳೆಯುತ ಶುಭಕೋರು ll

ಗುರುವಿನ ಆಜ್ಞೆಯ ಶಿರದಲಿ ಹೊರುವೆನು
ಮಾಡುವೆ ದಿನವೂ ಸೇವೆಯನು
ಮತಿಯನು ಬೆಳಗಿಸಿ ಗತಿಯನು ಕರುಣಿಸಿ
ಮುಂದಕೆ ನಡೆಸುವ ರಾಘವನು ll

ಗುರುವಿನ ಒಲುಮೆಯ ಪಡೆಯಲು ನಾವೂ
ದೇವನ ಕೃಪೆಯನು ಪಡೆದಂತೆ
ರಾಘವೇಶ್ವರ ಸ್ವಾಮಿಯ ಭಜಿಸಲು
ಸರಿವುದು ಬದುಕಲಿ ಬಲುಚಿಂತೆ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ