ಶಂಭೋ ಶಂಕರ
************
ಶಂಭೋ ಶಂಕರ ಹಿಮಗಿರಿ ವಾಸ
ಕರೆದಾಗ ಬರುವ ಪರಮೇಶ
ನಂದಿವಾಹನ ಪನ್ನಗ ಭೂಷಣ ಈಶ
ಭಕ್ತಿಗೆ ಒಲಿಯುವ ಜಗದೀಶ ll

ನೀಲ ಲೋಹಿತ ಡಮರುಗ ಹಸ್ತ
ಪ್ರಭೋ ಶಂಕರ ಕೈಲಾಸ ನಾಥ
ಮೃತ್ಯುಂಜಯ ದೇವ ನೀಲಕಂಠ
ಭಜಿಸುವೆ ನಿತ್ಯವು ಗಂಗಾಧರ ll

ಭಸ್ಮಧಾರಿಯೆ ತ್ರಿಯಂಬಕ ತ್ರಿನೇತ್ರನೆ
ನಂಬಿದವರಿಗೆ ಇಂಬನೀಯುವೆ
ಭಕ್ತರ ಸಲಹುವ ಪಾರ್ವತೀಶನೆ
ಅಭಯವ ನೀಡುವ ಸರ್ವೇಶನೆ ll

ಮೂರನೇ ಕಣ್ಣನು ತೆರೆದರೆ ನೀನು
ಭಸ್ಮವು ಮೂರು ಲೋಕವು
ಜ್ಞಾನದ ಕಣ್ಣನು ತೆರೆದು ಬೆಳಕನು
ತೋರುವ ಮಹಾದೇವನು ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ