ಶಂಭೋ ಶಂಕರ
***********
ಶಂಭೋ ಶಂಕರ ಪಾರ್ವತಿ ರಮಣನೆ
ಗಿರಿಜಾ ವಲ್ಲಭ ಪರಮೇಶ
ಕೈಲಾಸ ವಾಸಾ ಪಶುಪತಿ ಮೃಡಹರ
ಪಾಲಿಸು ಎನ್ನನು ಜಗದೀಶ ll

ಲೋಕವ ಬೆಳಗುತ ಜ್ಞಾನವ ನೀಡುತ
ಪಾಪವ ತೊಳೆಯುವ ಗುಣನಿಧಿಯೆ
ಲೋಕವ ಉಳಿಸಲು ವಿಷವನು ಕುಡಿದೆಯ
ಕರುಣಾ ಸಾಗರ ಭವಹರನೆ ll

ಲಿಂಗದ ರೂಪದಿ ದರುಶನ ನೀಡುವೆ
ಜ್ಞಾನದ ದೃಷ್ಟಿಯ ಬೀರುತಲಿ
ಭಕುತರ ಕರೆಯನು ಆಲಿಸಿ ಬರುವೆಯ
ಭಯವನು ಹೋಗಿಸು ಕರುಣೆಯಲಿ ll

✍️  ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ