ಮಾವಿನ ಮಿಡಿ
*********
ಮಾವಿನ ಮಿಡಿಯನು ಕಚ್ಚುತ ತಿನ್ನುವ
ಮುದ್ದಿನ ಬಾಲೆಯ ನೋಡಲ್ಲಿ
ನಗುವಿನ ಮುಖದಲಿ ಆಸೆಯು ತುಂಬಿದೆ
ಸುಂದರ ಮನಸಿನ ಭಾವದಲಿ ll

ಮಾವಿನ ಕಾಯಿಯು ಪರಿಮಳ ವಂತೂ
ಉಪ್ಪಿನ ಕಾಯಿಗೆ ಒಳ್ಳೆಯದೂ
ಮೆಣಸಿನ ಹುಡಿಯಲಿ ಉಪ್ಪನು ಸೇರಿಸಿ
ತಿನ್ನಲು ಒಳ್ಳೆಯ ರುಚಿಯಿಹುದು ll

ಮಾವಿನ ಮಿಡಿಯೇ ಇಷ್ಟೂ ರುಚಿಯಿರೆ
ಹಣ್ಣಿನ ರುಚಿಯದು ಏನಿದೆಯೊ
ಕರದಲಿ ಮಾವಿನ ಮಿಡಿಯದು ಗೊಂಚಲು
ಹಿಡಿದಿಹ ಸುಂದರಿ ಓ ಬಾಲೆ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ