ಬಿಡಲ್ಲ ಛಲ
********
ಕಡಿದರೇನು ಬಿಡದೆ ಬೆಳೆಯುವೆ
ಹಸಿರು ಸಸಿಯು ಹೇಳಿದೆ
ಒಣಗಿ ನಿಂತ ಮರದ ನಡುವಲಿ
ಬೆಳೆದ ಪರಿಯ ನೋಡಿದೆ ll

ಕಾಡು ಕಡಿದು ನಾಶ ಮಾಡಲು
ಹುಟ್ಟಿ ಬರುವ ಛಲವದು
ಶುದ್ಧ ಗಾಳಿ ಸಿಗಲು ಮನುಜಗೆ
ಮರದ ನೆರಳು ಇರುವುದು ll

ಇರದು ಯಾವ ಬೇಕು ಬೇಡವು
ಬೆಳೆವ ಮನಸು ಎನ್ನದು
ಬೆಳೆದು ನಿಂತ ಸಸಿಯು ಹೇಳಿತು
ದ್ರೋಹ ಬೇಡ ನಿನ್ನದು ll

ಏನೆ ಹೇಳಿ ಏನು ಮಾಡಿರು
ಎನಗೆ ಚಿಂತೆ ಇಲ್ಲವು
ಮತ್ತೆ ಮತ್ತೆ ಹುಟ್ಟಿ ಬರುವೆನು
ಎಂಬ ಆತ್ಮ ಧೈರ್ಯವು ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ