ಪ್ರೀತಿಯ ಹಾರ
**********
ಬೆಕ್ಕನು ನೋಡುತ ಹಕ್ಕಿಯು ಕುಳಿತಿದೆ
ಸಕ್ಕರೆಯಂತಹ ನಗುವಿನಲಿ
ಉಕ್ಕಿದ ಪ್ರೀತಿಯ ಪಕ್ಕನೆ ತೋರಿಸೆ
ಸಿಕ್ಕಿದ ಹಸುರಿನ ಹಾಸಿಗೆಲಿ ll

ಹೇಳಲು ಕಥೆಯನು ಕೇಳುವೆ ಚಂದದಿ
ಬಾಳಲು ಇಬ್ಬರು ಚೆನ್ನಾಗಿ
ಆಳಲು ಅರಸನು ಕಾಳಿಯ ಪೂಜಿಸಿ
ಗೋಳನು ಮರೆಸುತ ಕಣ್ಣಾಗಿ ll

ಪಾಲಿಸೆ ರಾಜ್ಯವ ಆಲಿಸೆ ಮಂತ್ರಿಯು
ಲಾಲಿಸಿ ಅಂದದಿ ಪ್ರಜೆಗಳನು
ಪಾಲಿಗೆ ಬಂದುದ ಪಾಲನೆ ಮಾಡಲು
ಮಾಲೆಯ ಹಾಕಿದ ಜನಗಳನು ll

ಒಂದಿನ ಕುವರಿಯ ಚಂದವ ಕಾಣಲು
ಬಂದನು ಸುಂದರ ಸುಕುಮಾರ
ಬಂದಿಹ ಕುವರನು ಮುಂದಿನ ದಿನದೊಳು
ತಂದನು ಪ್ರೀತಿಯ ಹೂಹಾರ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ