ಪ್ರಭೋ ಶ್ರೀರಾಮ
************
ಕರದಲಿ ಬಿಲ್ಲನು ಹಿಡಿದಾ ರಾಮನು
ಬಾಣವ ಬಿಟ್ಟನು ರಾವಣಗೆ
ಅಸುರರ ಕುಲವನು ಧ್ವoಸವ ಗೈಯಲು
ಮಾನವ ರೂಪದಿ ಬಂದವನೆ ll

ಸೀತಾ ಮಾತೆಯ ವರಿಸಿದ ರಾಮನೆ
ಲಕ್ಷ್ಮಣ ಸೋದರ ರಘುರಾಮ
ದಿವ್ಯದ ಮೂರ್ತಿಯ ಕಾಣುವ ಭಾಗ್ಯವ
ಕರುಣಿಸಿ ಕೊಟ್ಟಿಹ ಶ್ರೀರಾಮ ll

ಸೀತಾ ಮಾತೆಯ ಹುಡುಕಲು ಹಾರಿದ
ಲಂಕೆಯ ಕಡೆಗೇ ಹನುಮಂತ
ದಾರಿಯ ಮಧ್ಯದಿ ಎದುರಿಸಿ ನಿಂದಿಹ
ಸಿಂಹಿಣಿ ಎನ್ನುವ ರಾಕ್ಷಸಿಯು ll

ಯುದ್ಧದಿ ಸೋತಳು ಮೋಕ್ಷವ ಕರುಣಿಸಿ
ಮುಂದಕೆ ಸಾಗಿದ ಧೀಮಂತ
ಕರುಣದಿ ಪೊರೆವನು ರಾಮನ ಭಜಿಸಲು
ವರವನು ನೀಡುವ ಗುಣವಂತ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ