ಪಂಡಿತ್ ಪುಟ್ಟರಾಜ ಗವಾಯಿ
ಗುರುವೇ ಡಾಕ್ಟರ್ ಪಂಡಿತ್ ಪುಟ್ಟರಾಜ ಗವಾಯಿ
ಅಂದರ ಬಾಳಿಗೆ ಬೆಳಕಾದ ಸುಜ್ಞಾನಿ
ವ್ಯಾಮೋಹ ವರ್ಜಿತ ಸರ್ವಸಂಗ ಪರಿತ್ಯಾಗಿ
ಅವರೇ ನಮ್ಮ ಅಜ್ಜಯ್ಯ ಗಾನಯೋಗಿ.
ಕವಿ ಶ್ರೇಷ್ಠರು, ಗಾನ ಗಾರುಡಿಗರು,
ಸಕಲ ವಾದ್ಯಗಳ ವಾದಕರು, ನಡೆದಾಡುವ ದೇವರು
ಧರ್ಮ ಕರ್ಮ ಪ್ರವರ್ತಕರು ಅಂದರ ಅಂದತ್ವವ ನಿವಾರಿಸಿ ಬೆಳಗಾದವರು.
ತ್ರಿ ಭಾಷಾ ಪರಿಣತರು ಬ್ರೈಲ್ ಲಿಪಿಯ ಲೇಖಕರು
ಸುಭಾಷ ಪ್ರವಚನಕಾರರು
ಅಂದರ ಲೋಕದ ಚಂದಿರರು
ಅಂದತ್ವದ ಮೀರಿದ ಸಾಧಕರು ಸಂಗೀತ ಲೋಕದ ಮೇರು ದಿಗ್ಗಜರು.
– ಇವರೇ ನಮ್ಮ ನಡೆದಾಡುವ ದೇವರು ಸಂಗೀತದ ಮಹಾ ಪ್ರವರ್ತಕರು ಡಾಕ್ಟರ್ ಪುಟ್ಟರಾಜ ಗವಾಯಿ ಅಜ್ಜಯ್ಯನವರು.
– ಲೇಖಕರು: ರವೀಂದ್ರ ಸಿ.ವಿ.
ವಕೀಲರು, ಮೈಸೂರು