Table of Contents

ಪಂಡಿತ್ ಪುಟ್ಟರಾಜ ಗವಾಯಿಗಳು

ನವರಸಗಳನ್ನು ಮೇಳೖಸಿ ಅನುದಿನವು ಪ್ರವಚನವನ್ನು ಮಾಡುತ್ತಾ ವಾದ್ಯದೊಡನೆ ಸಂಗೀತರಾದನೆಯನ್ನ ಮಾಡುತ್ತಾ ತಮ್ಮ ಜನ್ಮ ಸಾರ್ಥಕ ಪಡಿಸಿಕೊಂಡವರು ನಮ್ಮ ಗದಗಿನ ವೀರಾಶ್ರಮ ಪುಣ್ಯಶ್ರಮದ ಡಾ ಪಂಡಿತ್ ಪುಟ್ಟರಾಜ ಗವಾಯಿಗಳು. ತಾವು ಅಂಧರಾದರೂ ಬಹಳಷ್ಟು ಅಂಧರ ಬಾರಳಿನಲ್ಲಿ ಸಂಗೀತದ ದೀಪ ಹಚ್ಚಿ ಅವರ ಬಾಳ ಬೆಳಗಿದವರು ನಮ್ಮ ಗವಾಯಿ ಅಜ್ಜಯ್ಯನವರು. ಹಾವೇರಿ ತಾಲೂಕಿನ ದೇವಗಿರಿಯಲ್ಲಿ ರೇವಯ್ಯ ವೆಂಕಟಪುರ ಮಠ ಮತ್ತು ಸಿದ್ದಮ್ಮ ದಂಪತಿಗಳ ಪುತ್ರರಾಗಿ ಜನ್ಮ ತಾಳಿದರು ಆರನೇ ವಯಸ್ಸಿನಲ್ಲಿ ತಮ್ಮ ಕಣ್ಣನ್ನ ಕಳೆದುಕೊಂಡರು ಎಂಟನೇ ವಯಸ್ಸಿನಲ್ಲಿ ಸಂಗೀತಾಸಕ್ತಿಯಿಂದ ಆಶ್ರಮಕ್ಕೆ ಬಂದರು ಗುರುವಿನ ಕೃಪಾಕಟಾಕ್ಷದಿಂದ ಅವರ ಮೇಲೆ ಬೀಳಲು ಇವರ ಜೀವನವೇ ಮೇರು ಪರ್ವತವಾಯಿತು. ನಿಷ್ಠೆ ವಿಶ್ವಾಸ ನಂಬಿಕೆಯಿಂದ 1988ರಲ್ಲಿ ವೀರಶ್ರಮ ಪುಣ್ಯಶ್ರಮದ ಪೀಠಾಧಿಪತಿಗಳಾದರು.
ಅಂದಿನಿಂದ ಕಾಯಕವೇ ಕೈಲಾಸ ಎನ್ನುವಂತ ನಾಣ್ಣುಡಿಯಂತೆ ಅಂದರ ಪಾಲಿಗೆ ಇವರೇ ಕಣ್ಣಾದರು. ಬೆಳಗ್ಗೆ 4:00ಗೆ ಎದ್ದು ತಮ್ಮ ನಿತ್ಯ ಕರ್ಮವನ್ನು ಮಾಡಿ ದೇವರ ಕೋಣೆಯಲ್ಲಿ ತಮ್ಮ ಇಷ್ಟಲಿಂಗದ ಪೂಜೆಯಲ್ಲಿ ಸುಮಾರು ನಾಲ್ಕರಿಂದ ಐದು ತಾಸು ಕಳೆಯುತ್ತಿದ್ದರು. ದಿನಾಲು ನಾಲ್ಕರಿಂದ ಐದು ತಾಸು ಮಕ್ಕಳಿಗೆ ಸಂಗೀತವನ್ನು ಪಾಠ ಮಾಡುತ್ತಿದ್ದ ಸಂತರಿವರು. ಪೂಜೆಯ ನಂತರದಲ್ಲೇ ಪ್ರಸಾದವನ್ನು ಸ್ವೀಕರಿಸುತ್ತಿದ್ದರು. ಅಂದತ್ವದ ಶಾಪ ನಿಗ್ರಹಿಸಲು ಅಂದರಿಗೆ ಸ್ವತಂತ್ರವಾಗಿ ಬದುಕನ್ನ ಸಾಗಿಸಲು ಆತ್ಮವಿಶ್ವಾಸ ತುಂಬಿ ಅವರ ಜೀವನಕ್ಕೆ ಪ್ರವಚನ ಸಂಗೀತ ಪುರಾಣ ಕಥೆಗಳನ್ನು ಹೇಳುತ್ತಿದ್ದರು. ತಮ್ಮ ವಿದ್ಯೆಯನ್ನ ಅವರಿಗೆ ದಾರಿ ಎರೆಯುತ್ತಿದ್ದರು. ಇವರಿಗೆ ಹಣ ಬೇಕಾಗಿರಲಿಲ್ಲ .ಇವರು ಲಿಂಗ ಪೂಜೆಯ ನಿಷ್ಠೆಯಿಂದ ವಿಶಿಷ್ಟವಾದ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದ್ದರು. ಅದರಿಂದಲೇ ಇವರು ನಡೆದಾಡುವ ದೇವರಾದರು. ಗುರು ಪಂಚಾಕ್ಷರಿ ಗವಾಯಿಗಳ ದಂಡವನ್ನು ಹಿಡಿದು ಇವರು ನಡೆದಾಡುತ್ತಿದ್ದರೆ ಇವರನ್ನು ಎಲ್ಲರೂ ನಡೆದಾಡುವ ದೇವರು ಎಂಬುದಾಗಿ ಕಾಣುತ್ತಿದ್ದರು.
ಇವರು ಸರ್ವಸಂಗ ಪರಿತ್ಯಾಗಿಗಳಾಗಿದ್ದರು .ಯಾವುದರ ಮೇಲು ವ್ಯಾಮೋಹವನ್ನು ಇಟ್ಟುಕೊಂಡಿರಲಿಲ್ಲ. ಸಂಗೀತದ ಎಲ್ಲಾ ವಾದ್ಯಗಳನ್ನು ಏಕಕಾಲಕ್ಕೆ ನುಡಿಸಿ ಕೇಳುಗರನ್ನ ಬೆರಗುಗೊಳಿಸಿದ್ದರು. ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದಲ್ಲಿ ಪ್ರಭುತ್ವವನ್ನು ಸಾಧಿಸಿ ಮಹಾ ದಿಗ್ಗಜರೆನಿಸಿಕೊಂಡರು. ಇವರಿಗೆ 1970ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1975ರಲ್ಲಿ ಕರ್ನಾಟಕದ ವಿವಿ ಇಂದ ಗೌರವ ಡಾಕ್ಟರೇಟ್, 1998ರಲ್ಲಿ ಕನಕ ಪುರಂದರ ಪ್ರಶಸ್ತಿ ಮತ್ತು ನಾಡೋಜ ಪ್ರಶಸ್ತಿ, 1999ರಲ್ಲಿ ಕೇಂದ್ರ ಸರ್ಕಾರದ ಸಾಹಿತ್ಯ ನಾಟಕ ಅಕಾಡೆಮಿ ಪ್ರಶಸ್ತಿ, 2002ರಲ್ಲಿ ಬಸವಶ್ರೀ ಪ್ರಶಸ್ತಿ ಹಾಗೂ ಮಧ್ಯಪ್ರದೇಶ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಕಾಳಿದಾಸ ಸಮ್ಮಾನ್ ಪ್ರಶಸ್ತಿಗಳು ಲಭಿಸಿದೆ. ಇನ್ನೂ 10 ಹಲವಾರು ಪ್ರಶಸ್ತಿಗಳು ಇವರನ್ನ ಅರಸಿಕೊಂಡು ಬಂದಿದೆ. ಇವರು ನೂರಕ್ಕೂ ಅಧಿಕವಾದ ಪುಸ್ತಕಗಳನ್ನು ಬರೆದಿದ್ದಾರೆ. ಕನ್ನಡ, ಹಿಂದಿ, ಸಂಸ್ಕೃತ, ಬ್ರೆಲಿಪಿಯಲ್ಲಿ ಸಹ ಇವರು ಪುಸ್ತಕವನ್ನು ಬರೆದಿದ್ದಾರೆ.
ಇವರು 17 ಸೆಪ್ಟೆಂಬರ್ 2018 ರಂದು ಪುಣ್ಯಶ್ರಮದಲ್ಲಿ ತಮ್ಮ ಕೊನೆಯುಸಿರೆನ್ನ ಎಳೆದಿದ್ದಾರೆ ಇಂತಹ ಮೇರು ವ್ಯಕ್ತಿತ್ವವನ್ನು ಕಳೆದುಕೊಂಡ ನಮಗೆ ತುಂಬಲಾರದ ನಷ್ಟವಾಯಿತು. ಇಂತಹ ಸಾತ್ವಿಕ ಸದ್ಗುಣ ಪರಮ ಪುರುಷರು ಆಧ್ಯಾತ್ಮಿಕದಲ್ಲಿ ಅನುಭವ ಹೊಂದಿದವರು ನಮ್ಮಂತಹ ಮನುಜರಿಗೆ ಎಂದೆಂದಿಗೂ ದಾರಿದೀಪವಾಗಿರುತ್ತಾರೆ ಇಂತಹ ಮೇರು ವ್ಯಕ್ತಿತ್ವದ ಪುಟ್ಟರಾಜ ಗವಾಯಿ ಅವರನ್ನು ಕಳೆದುಕೊಂಡ ನಾವು ಇಂದು ಅವರನ್ನು ಮರೆಸಿಕೊಳ್ಳುತ್ತಾ ಅವರಿಗಾಗಿ ಅಶ್ರು ತರ್ಪಣವನ್ನ ನೀಡೋಣ …. ಅವರನ್ನು ಆರಾಧಿಸೋಣ.
  • ಲೇಖಕರು: ರವೀಂದ್ರ ಸಿ.ವಿ., ವಕೀಲರು, ಮೈಸೂರು