ನೀಡು ದೇವರ ಭಿಕ್ಷೆ

ಸುನಾಮಿಯಂತೆ…..ಭೂಕಂಪದಂತೆ…..
ಸಮುದ್ರದ ಅಲೆಗಳಂತೆ ಬರಸಿಡಿಲು ಬಡಿತೆ
ಶ್ರೀಗಳ ಭಕ್ತರ ಹೃದಯ ಆಘಾತಗೊಂಡಿತೆ
ಶಿವನ ಶಿಷ್ಯ ಶಿವಣ್ಣನವರು ಶಿವೈಕ್ಯರಾದರೆಂದು

ನಾಡೆಲ್ಲಾ ಅಳುತಿರಲು ದುಃಖ ಮಡಿಲಲ್ಲಿ ತೇಲುತ್ತಿರಲು
ನಿನಗಿಲ್ಲವೇ ಕರುಣೆ ಓಹೋ ಜವರಾಯನೇ
ತೆಗೆದುಕೋ ನಮ್ಮ ಜೀವವ ಕೊಡು ನಮಗೆ ನಮ್ಮ ದೇವರ
ಓ ನೀಚ ಜವರಾಯನೇ ಬಿಟ್ಟುಬಿಡು
ನಮ್ಮ ಲೋಕದ ನಡೆದಾಡುವ ದೇವರನ್ನ

ಶಾಂತಿ ಬಯಸಿದ ಶಾಂತಿದೂತ
ಜಗದಲಿ ಅವರ ವ್ಯಕ್ತಿತ್ವವೇ ಅದ್ಭುತ
ಅನ್ನ ಅಕ್ಷರ ಆಶ್ರಯ ನೀಡಿದಾತ
ವಿಶ್ವ ಮನುಕುಲಕ್ಕೆ ಸಾರಥಿಯಾದತ
ಇಂದು ದೇವರ ಲೋಕಕ್ಕೆ ಅತಿಥಿಯಾದತ
ಮುಕ್ಕೋಟಿ ದೇವರಿಂದ ಸ್ವಾಗತಿಸಿ ಕೊಂಡಾತ

ಪಾಪಿಗಳು ಇರುವವರು ಈ ಲೋಕದಾಗೆ
ಅವರನ್ನು ಬಿಟ್ಟು ನಮ್ಮ ದೇವರ ಮೇಲೆ ಕಣ್ಣ್ಯಾಕೆ
111 ಆದರೂ ಶಾಂತಿ ನಾಡನು ಕಟ್ಟಿದವರು
ಜನಕಲ್ಯಾಣಕ್ಕಾಗಿ ಹಗಲಿರಳು ದುಡಿದವರು
ಕರುಣಿಸು ಕಟುಕ ಓ ಜವರಾಯನೇ
ಕೊಟ್ಟುಬಿಡು ನಮಗೆ ನಮ್ಮ ದೇವರ

ಸರಳತೆಯ ಕಾಯಕಯೋಗಿ
ತತ್ವ-ಸಿದ್ಧಾಂತ ಪಾಲಿಸಿದ ಮಹಾಯೋಗಿ
ನಿಮ್ಮೊಂದಿಗಿರುವ ಈ ದೇವರ ಕಂಡು
ಜವರಾಯನೇ ನೀ ನಮ್ಮ ದೇವರ ಹಾಯ್ಕೆ ಮಾಡಿ
ಆ ಕಾಯಕವ ನೀ ಅವನಿಗೊಪ್ಪಿಸಿದಿಯಾ
ಓ ಶಿವನೇ ಕರುಣಿಸು ಶಿವಣ್ಣನ ನಮಗೆ ಪಾಲಿಸು

ಆ ದೇವರಿಲ್ಲದ ಈ ನಾಡು ಅನಾಥವಾಗಿದೆ
ಬಿಟ್ಟುಬಿಡು ನಮ್ಮ ದೇವರಾ……
ಕೊಟ್ಟುಬಿಡು ನಮ್ಮ ದೇವರಾ…….
ಹವಣಿಸು ನೀ ನಮ್ಮ ಜನ್ಮವಾ….
ಮರುಜನ್ಮ ನೀ ನೀಡು……..
ಮತ್ತೆ ಹುಟ್ಟಿ ಬರಲಿ ನಮ್ಮ ದೇವರು

ರಚನೆ: ಶ್ರೀ ಹಾಲೇಶ್ ಹಕ್ಕಂಡಿ, ವಿಜಯನಗರ